Advertisement
ಕೋಲಾರ: ಚುನಾವಣಾ ಸನಿಹದಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಕೋಲಾರ ಜಿಲ್ಲೆಯ ವಿಚಾರದಲ್ಲಿ ಯಾವುದೇ ವಿಶೇಷ ಘೋಷಣೆಗಳಿಲ್ಲದ ರೈತರ ಕೈಗೆಟುಕದ ಬಜೆಟ್ ಎಂದು ಜಿಲ್ಲೆಯ ಜನ ಅಭಿಪ್ರಾಯ ಪಟ್ಟಿದ್ದಾರೆ.
Related Articles
Advertisement
ನರೇಗಾಗೆ 60 ಸಾವಿರ ಕೋಟಿ ರೂ.: ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 60 ಸಾವಿರ ಕೋಟಿ ರೂ.ಗಳನ್ನು ಮೀಸಲಾಗಿಟ್ಟಿದೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ನರೇಗಾ ಅನು ಷ್ಠಾನದಲ್ಲಿ ಮೊದಲ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಗೆ ಮತ್ತಷ್ಟು ಪ್ರಯೋಜನವಾಗಲಿದೆ. ಇದೇ ವೇಗದಲ್ಲಿ ಕೋಲಾರ ಜಿಲ್ಲೆ ನರೇಗಾ ಅನುಷ್ಠಾನಕ್ಕೆ ಮುಂದಾದರೆ ಬಜೆಟ್‌ನಲ್ಲಿ ಘೋಷಿಸಿರುವ 60 ಸಾವಿರ ಕೋಟಿ ರೂ.ಗಳಿಂದ ಹೆಚ್ಚಿನ ಪ್ರಯೋಜನ ವಾಗಲಿದೆ.
ಪರಿಶಿಷ್ಟ ಅನುದಾನ ಹೆಚ್ಚಳ: ದೇಶದಲ್ಲಿಯೇ ಅತಿ ಹೆಚ್ಚು ಪರಿಶಿಷ್ಟರು ಕೋಲಾರ ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ 76 ಸಾವಿರ ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕ್ಕಾಗಿ 50 ಸಾವಿರ ಕೋಟಿ ರೂ.ಗಳನ್ನು ನಿಗದಿಪಡಿ ಸಿದೆ. ಈ ಅನುದಾನದಲ್ಲಿ ರೂಪಿಸುವ ಯೋಜನೆ ಗಳ ಪ್ರಯೋಜನ ಕೋಲಾರ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದವರಿಗೆ ದಕ್ಕುವ ಸಾಧ್ಯತೆಗಳಿವೆ.
ಪಿಂಚಣಿ ಯೋಜನೆ: ಅಸಂಘಟಿತ ಕಾರ್ಮಿಕರು ಪ್ರತಿ ತಿಂಗಳು 100 ರೂ. ಪಾವತಿಸಿದರೆ 60 ವರ್ಷದ ಬಳಿಕ ಪ್ರತಿ ತಿಂಗಳು 3 ಸಾವಿರ ರೂ.ಗಳ ಪಿಂಚಣಿ ಪಡೆಯಬಹುದು ಎನ್ನುವ ಪ್ರಧಾನ ಮಂತ್ರಿ ಶ್ರಮಯೋಗಿ ಮಂದಾನ್ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದೆ. ಆದರೆ, ದಿನಗೂಲಿ ಮಾಡುವ ಅಸಂಘಟಿತ ಕಾರ್ಮಿಕರು ಪ್ರತಿ ತಿಂಗಳು 100 ರೂ. ಪಾವತಿಸುವುದಕ್ಕೆ ಕಟ್ಟು ಬೀಳುವುದು ಕಷ್ಟದ ಕೆಲಸವೆಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯವಾಗಿದೆ.
* ಕೆ.ಎಸ್.ಗಣೇಶ್