Advertisement

ವಿಚ್ಛೇದನ ಸಿಕ್ಕ ಖುಷಿಯಲ್ಲಿ ಸಾಹಸ; ಮುರಿಯಿತು ಬೆನ್ನುಮೂಳೆ, ಕತ್ತು!

12:38 AM May 09, 2023 | Team Udayavani |

ರಯೋ ಡಿ ಜನೈರೊ: ಬ್ರೆಜಿಲ್‌ನಲ್ಲಿ 22 ವರ್ಷದ ವ್ಯಕ್ತಿಯೊಬ್ಬ ವಿಚ್ಛೇದನ ಸಿಕ್ಕಿದ ಖುಷಿಯಲ್ಲಿ ಸಾಹಸ ಮಾಡಲು ಹೋಗಿದ್ದಾರೆ. ಪರಿಣಾಮ ಕತ್ತು, ಬೆನ್ನು ಮೂಳೆ ಮುರಿದುಕೊಂಡಿದ್ದಾರೆ.

Advertisement

ಅದೃಷ್ಟವಶಾತ್‌ ಸಾವಿನಿಂದ ಪಾರಾಗಿದ್ದಾರೆ. ಗಮನಿಸ­ಬೇಕಾದ ಸಂಗತಿಯೆಂದರೆ ಅವರಿಗೀಗ ತಪ್ಪಿನ ಅರಿವಾಗಿದೆ. ಮೊದಲಿನಂತೆ ಹೇಗೆಹೇಗೋ ಬದುಕುವ ಯೋಚನೆಗಳಿಂದ ಹೊರಬಂದಿ­ದ್ದೇನೆಂದು ರಫಾಯೆಲ್‌ ಟೊಸ್ಟಾ ಹೇಳಿದ್ದಾರೆ.

ಈ ಘಟನೆ ನಡೆದಿದ್ದು ಫೆ.11ರಂದು, ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗೆ ತೀವ್ರ ಮಾನಸಿಕ ವೇದನೆ ಅನುಭವಿಸುತ್ತಿದ್ದಾರೆ.

ಆಗಿದ್ದೇನು?: ಪತ್ನಿಯಿಂದ ಅವರು ವಿಚ್ಛೇದನ ಪಡೆದಿದ್ದರು. ಅದೇ ಖುಷಿಯಲ್ಲಿ ತಮ್ಮ ಸಂಬಂಧಿಕನೊಂದಿಗೆ ಕ್ಯಾಂಪ್‌ ಮ್ಯಾಗ್ರೊದಲ್ಲಿರುವ ಲಗೊವಾ ಅಜುಲ್‌ ಎಂಬ ಜಾಗಕ್ಕೆ ತೆರಳಿದ್ದರು. ಅಲ್ಲಿ ಎರಡೂ ಹಿಮ್ಮಡಿಗಳಿಗೆ ಹಗ್ಗ ಕಟ್ಟಿಕೊಂಡು ಹಾರಿ­ದ್ದರು. ಹತ್ತಿರ ಹತ್ತಿರ 70 ಅಡಿ ಕೆಳಕ್ಕೆ ಹೋಗಿದ್ದಾಗ ಕಾಲಿಗೆ ಕಟ್ಟಿದ್ದ ಹಗ್ಗ ಕಿತ್ತುಹೋಯಿತು. ಕಡೆಗೆ ಅಲ್ಲೇ ಇದ್ದ ಕೊಳಕ್ಕೆ ಬಿದ್ದರು. ಪರಿಣಾಮ ಬೆನ್ನುಮೂಳೆಯ ಕೆಳಭಾಗ, ಕತ್ತನ್ನು ಮುರಿದುಕೊಂಡರು. ಅಲ್ಲೇ ಇದ್ದ ಜನರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಬಚಾವ್‌ ಮಾಡಿದರು. ವಾಸ್ತವವಾಗಿ ಅವರು ಕಾಲಿಗೆ ಹಗ್ಗ ಕಟ್ಟಿಕೊಂಡು ನೇತಾಡಲು ಹೋಗಿದ್ದು, ಆದರೆ ಆಗಿದ್ದೇ ಬೇರೆ.

Advertisement

Udayavani is now on Telegram. Click here to join our channel and stay updated with the latest news.

Next