Advertisement

ಅಮಿರಾ ದಸ್ತೂರ್‌ 

06:00 AM Dec 07, 2018 | Team Udayavani |

ಕತೆಯೇ ಮುಖ್ಯ ಉಳಿದುದೆಲ್ಲ ಗೌಣ ಎನ್ನುವುದು ಅಮಿರಾ ದಸ್ತೂರ್‌ ಅಭಿಪ್ರಾಯ. ಥಗ್ಸ್‌ ಆಫ್ ಹಿಂದುಸ್ಥಾನ್‌ ಚಿತ್ರದ ಉದಾಹರಣೆ ನೀಡುವ ಮೂಲಕ ಅಮಿರಾ ತನ್ನ ವಾದವನ್ನು ಸಮರ್ಥಿಸುತ್ತಾಳೆ. ಅಮೀರ್‌ ಖಾನ್‌, ಅಮಿತಾಭ್‌ ಬಚ್ಚನ್‌ ಅವರಂಥ ದಿಗ್ಗಜರೂ ಇದ್ದೂ ಈ ಚಿತ್ರ ಮಕಾಡೆ ಮಲಗಬೇಕಾದರೆ ಜನರು ಬೇರೇನನ್ನೋ ಬಯಸುತ್ತಿದ್ದಾರೆ ಎನ್ನುತ್ತಿರುವ ಸೂಚನೆ ಎಂಬುದು ಅಮಿರಾಳ ವಾದ. ಇಷ್ಟೆಲ್ಲ ಹೇಳಿದ ಬಳಿಕ ಈ ಅಮಿರಾ ಯಾರು ಎನ್ನುವ ಪ್ರಶ್ನೆ ನಿಮಗೆದುರಾಗಿರಬಹುದು. 

Advertisement

ಇಸಾಕ್‌  ಚಿತ್ರದಲ್ಲಿ ಪ್ರತೀಕ್‌ ಬಬ್ಬರ್‌ ಎದುರು ನಾಯಕಿಯಾಗಿ ಎಂಟ್ರಿ ಕೊಟ್ಟವಳೇ ಅಮಿರಾ. ಹದಿಹರೆಯದಲ್ಲೇ ಚಿತ್ರರಂಗಕ್ಕೆ ಬಂದಿದ್ದರೂ ಇನ್ನೂ ಒಂದು ನೆಲೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ನೋವು ಅಮಿರಾಳಿಗಿದೆ. ಈ ನೋವಿನಲ್ಲೇ ಅವಳು ಬಾಲಿವುಡ್‌ನ‌ಲ್ಲಿ ಹೊರಗಿನವರಿಗೆ ಗಟ್ಟಿ ಕತೆಯಿರುವ ಚಿತ್ರ ಸಿಗುತ್ತಿಲ್ಲ ಎಂದು ಹೇಳಿ ಹಲವರ ನಿಷ್ಠುರ ಕಂಡುಕೊಂಡಿದ್ದು. 

ಬಾಲಿವುಡ್‌ನಿಂದ ತೊಡಗಿ ತಮಿಳು, ತೆಲುಗು, ಬಂಗಾಲಿ ಎಂದು ಒಂದು ಸುತ್ತು ತಿರುಗಾಡಿ ಮರಳಿ ಬಾಲಿವುಡ್‌ ಅಂಗಳಕ್ಕೆ ಮರಳಿರುವ ಅಮಿರಾ ಈಗ ಲೀನಾ ಯಾದವ್‌ ನಿರ್ದೇಶಿಸುತ್ತಿರುವ ರಾಜ್ಮಾ ಚಾವಲ್‌ ಮೂಲಕ ಮತ್ತೂಂದು ಸಲ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾಳೆ. ಅಂದ ಹಾಗೆ ಬೆಳ್ಳಿತೆರೆಯಲ್ಲಿ ಅಮಿರಾಳಿಗೆ ಸಾಕಷ್ಟು ಅವಕಾಶ ಇಲ್ಲದಿದ್ದರೂ ಡಿಜಿಟಲ್‌ ಮೀಡಿಯಾದಲ್ಲಿ ಮಾತ್ರ ಸಖತ್‌ ಆಗಿ ಮಿಂಚುತ್ತಿದ್ದಾಳೆ. ಪ್ರಸ್ತುತ ತಯಾರಾಗುತ್ತಿರುವ ರಾಜ್ಮಾ ಚಾವಲ್‌  ಕೂಡ ಮೊದಲು ಡಿಜಿಟಲ್‌ ಮೀಡಿಯಾದಲ್ಲಿ ಬಿಡುಗಡೆಯಾಗಲಿದೆ. ಇದೊಂದು ಯಾವುದೇ ಮಿತಿಗಳು ಇಲ್ಲದ ಮಾಧ್ಯಮ. ಹೇಳಲಿರುವುದನ್ನು ಮುಕ್ತವಾಗಿ ಹೇಳಲು ಡಿಜಿಟಲ್‌ ಮಾಧ್ಯಮ ಉತ್ತಮ ಎನ್ನುತ್ತಾಳೆ ಅಮಿರಾ.

Advertisement

Udayavani is now on Telegram. Click here to join our channel and stay updated with the latest news.

Next