Advertisement

ಅಮ್ಮಿ ಜಾಕ್ಸನ್‌ ಬಂದಾಳ ! 

03:45 AM Jan 27, 2017 | |

ಅಮಿ ಜಾಕ್ಸನ್‌ ಎಂಬ ಹೆಸರು ಬಾಲಿವುಡ್‌ನ‌ವರಿಗೆ ಬಹುತೇಕ ಮರೆತುಹೋಗಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಎರಡು ವರ್ಷದ ಹಿಂದೆ ಅಕ್ಷಯ್‌ ಕುಮಾರ್‌ ಜತೆಗೆ ಸಂಗ್‌ ಈಸ್‌ ಬ್ಲಿಂಗ್‌  ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಅಮಿಗೆ ದೊಡ್ಡ ಅವಕಾಶಗಳು ಸಿಕ್ಕಿಲ್ಲ. 

Advertisement

ಕಳೆದ ವರ್ಷ ಬಿಡುಗಡೆಯಾದ ಫ್ರೀಕಿ ಅಲಿ  ಚಿತ್ರದಲ್ಲಿ ಒಂದು ಪಾತ್ರ ಇದ್ದರೂ ಚಿತ್ರ ಬಂದು ಹೋದದ್ದೇ ತಿಳಿಯಲಿಲ್ಲ. ಭಾರೀ ನಿರೀಕ್ಷೆಯೊಂದಿಗೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದ ಅಮಿ ಜಾಕ್ಸನ್‌ ತೀರಾ ನಿರಾಶೆಯಲ್ಲಿರುವಾಗಲೇ ದೊಡ್ಡದೊಂದು ಬ್ರೇಕ್‌ ಸಿಕ್ಕಿದೆ. ರಜನೀಕಾಂತ್‌ ಜತೆಗೆ 2.0 ಚಿತ್ರದಲ್ಲಿ ನಾಯಕಿಯಾಗಿ ಅಮಿ ನಟಿಸುತ್ತಿದ್ದಾಳೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕೂಡ ಪ್ರಮುಖ ಪತ್ರದಲ್ಲಿರುವ 2.0 ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿದೆ. 

ಕಳೆದ ಕೆಲ ಸಮಯದಿಂದ ರಜನೀಕಾಂತ್‌ ಚಿತ್ರಗಳು ಬಿಡುಗಡೆಗೆ ಮೊದಲು ಸದ್ದು ಮಾಡುವಷ್ಟು ಬಿಡುಗಡೆಯಾದ ಬಳಿಕ ಮಾಡುವುದಿಲ್ಲ. ಆದರೂ ಬಿಡುಗಡೆಯಾಗುವ ಮೊದಲು ಭಾರೀ ಹವಾ ಸೃಷ್ಟಿಸುವುದರಿಂದ ಅಮಿ ಈ ಚಿತ್ರದಿಂದ ಬ್ರೇಕ್‌ ಸಿಗುವ ನಿರೀಕ್ಷೆಯಲ್ಲಿದ್ದಾಳೆ.

ಭಾರತದ ಜತೆಗೆ ಯಾವ ರೀತಿಯ ಸಂಬಂಧವೂ ಇಲ್ಲದ ಅಮಿ ಬಾಲಿವುಡ್‌ನ‌ಲ್ಲಿ ಮಿಂಚಬೇಕೆಂಬ ಒಂದೇ ಒಂದು ಹಂಬಲದಿಂದ  ವಿಮಾನ ಏರಿದವಳು. ಹುಟ್ಟೂರಿನಲ್ಲಿರುವಾಗ ಹದಿಹರೆಯದಲ್ಲೇ ಹಲವಾರು ಸೌಂದರ್ಯ ಪ್ರಶಸ್ತಿ ಗೆದ್ದಿರುವ ಅಮಿ, ಇದನ್ನೇ ಒಂದು ಅರ್ಹತೆ ಎಂದು ಭಾವಿಸಿದ್ದಾಳೆ. ಅವಳನ್ನು ಭಾರತಕ್ಕೆ ಕರೆತಂದದ್ದು ತಮಿಳರು. ತಮಿಳಿನ ನಾಗಪಟ್ಟಣಂ ಮೊದಲ ಚಿತ್ರ. 

ತಮಿಳು ಮತ್ತು ತೆಲುಗಿನಲ್ಲಿ ಯಶಸ್ವಿ ನಟಿಯಾದರೂ ಅಮಿಗೆ ಬಾಲಿವುಡ್‌ ಮಣೆ ಹಾಕಲಿಲ್ಲ. ಐದು ವರ್ಷದ ಹಿಂದೆ ಏಕ್‌ ದೀವಾನ ಥಾ  ಮೂಲಕ ಹಿಂದಿ ಚಿತ್ರರಂಗಕ್ಕೆ ಬಂದ ಅಮಿ, ಸಿನೆಮಾಕ್ಕಿಂತಲೂ ನಟ ಪ್ರತೀಕ್‌ ಬಬ್ಬರ್‌ ಜತೆಗಿನ ಡೇಟಿಂಗ್‌ನಿಂದಲೇ ಹೆಚ್ಚು ಪ್ರಚಾರದಲ್ಲಿದ್ದಳು. ಇದೀಗ ರಜನೀಕಾಂತ್‌ ಮಹಿಮೆಯಿಂದಲಾದರೂ ಅಮಿಗೆ ಒಳ್ಳೆಯ ದಿನಗಳು ಬರಬಹುದೆ? ಕಾಲವೇ ಉತ್ತರ ಹೇಳಬೇಕು. 

Advertisement
Advertisement

Udayavani is now on Telegram. Click here to join our channel and stay updated with the latest news.

Next