Advertisement

ಚುಮು ಚುಮು ಚಳಿಯಲ್ಲಿ ಹಾಟ್‌ ಬೆಡಗಿ ಆ್ಯಮಿ ಜಾಕ್ಸನ್‌

06:31 PM Sep 04, 2017 | Team Udayavani |

ಚಿಕ್ಕಮಗಳೂರು ಎಂದರೆ ನಿಮ್ಮ ಕಣ್ಣಮುಂದೆ ಬರೋದು ಹಚ್ಚಹಸಿರು, ಬೆಟ್ಟ, ಗುಡ್ಡ, ಜೊತೆಗೆ ಚುಮುಚುಮು ಚಳಿ. ಅದರಲ್ಲೂ ಸದ್ಯದ ಚಿಕ್ಕಮಗಳೂರಿನ  ವಾತಾವರಣವಂತೂ ಹಿತವಾಗಿದೆ ಎನ್ನುವುದನ್ನು ಹೊಸದಾಗಿ ಹೇಳಬೇಕಿಲ್ಲ. ಚಿಕ್ಕಮಗಳೂರಿನ ಇಂತಹ ಚುಮುಚುಮು ಚಳಿಯ ವಾತಾವರಣಕ್ಕೆ ಹಾಟ್‌ ಹುಡುಗಿಯೊಬ್ಬಳು ಎಂಟ್ರಿಕೊಡುತ್ತಿದ್ದಾಳೆ. ಬರೀ ಎಂಟ್ರಿಯಲ್ಲ, ಚಿಕ್ಕಮಗಳೂರಿನ ಬೆಟ್ಟದ ತುದಿಯಲ್ಲಿ ನಿಂತು ಫೋಸ್‌ ಕೊಡಲಿದ್ದಾಳೆ. ಆಕೆ ಬೇರಾರು ಅಲ್ಲ, ಆ್ಯಮಿ ಜಾಕ್ಸನ್‌.

Advertisement

ಆ್ಯಮಿ ಜಾಕ್ಸನ್‌ ಚಿಕ್ಕಮಗಳೂರಿಗೆ ಟ್ರಕ್ಕಿಂಗ್‌ ಬರುತ್ತಿದ್ದಾರಾ ಎಂದು ನೀವು ಕೇಳುವಂತಿಲ್ಲ. ಏಕೆಂದರೆ ಆ್ಯಮಿ ಜಾಕ್ಸನ್‌ ಚಿಕ್ಕಮಗಳೂರಿಗೆ ಬರಲು ಕಾರಣ ನಿರ್ದೇಶಕ ಪ್ರೇಮ್‌. ಹೌದು, ಪ್ರೇಮ್‌ ನಿರ್ದೇಶನದ “ದಿ ವಿಲನ್‌’ ಚಿತ್ರದ ಚಿತ್ರೀಕರಣ ಸತತವಾಗಿ ನಡೆಯುತ್ತಿದ್ದು, ಇಂದಿನಿಂದ ಚಿಕ್ಕಮಗಳೂರಲ್ಲಿ “ದಿ ವಿಲನ್‌’ ಚಿತ್ರೀಕರಣ ನಡೆಯಲಿದೆ. 

ಚಿತ್ರೀಕರಣದಲ್ಲಿ ಬ್ರಿಟಿಷ್‌ ಮಾಡೆಲ್‌ ಆ್ಯಮಿ ಜಾಕ್ಸನ್‌ ಚಿಕ್ಕಮಗಳೂರಿನ ಬೆಟ್ಟ ಹತ್ತಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಪ್ರೇಮ್‌ ಹಾಡಿನ ಸನ್ನಿವೇಶ ಚಿತ್ರೀಕರಿಸುತ್ತಿದ್ದಾರಾ ಎಂದು ನೀವು ಕೇಳಬಹುದು. ಖಂಡಿತಾ ಅಲ್ಲ, ಸುದೀಪ್‌ ಹಾಗೂ ಆ್ಯಮಿ ಜಾಕ್ಸನ್‌ ಕಾಂಬಿನೇಶನ್‌ನ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ. “ಬೆಟ್ಟದ ಮೇಲೊಂದು ಕೆರೆ ಇದೆ. ತುಂಬಾ ಚೆನ್ನಾಗಿದೆ. ಈ ಸಮಯದಲ್ಲಿ ಅದು ತುಂಬಿಕೊಂಡಿರುತ್ತದೆ. ಆ ಜಾಗದಲ್ಲಿ ಚಿತ್ರೀಕರಣ ನಡೆಯಲಿದೆ’ ಎನ್ನುವುದು ಪ್ರೇಮ್‌ ಮಾತು.

ಅಂದಹಾಗೆ, ಪ್ರೇಮ್‌ ಈಗಾಗಲೇ ಮಿಥುನ್‌  ಚಕ್ರವರ್ತಿಯವರು ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಅವರು ಕೊಟ್ಟ ಡೇಟ್‌ನಂತೆ ಅವರ ಚಿತ್ರೀಕರಣವನ್ನು ಪ್ರೇಮ್‌ ಶನಿವಾರ ರಾತ್ರಿ ಪೂರ್ಣಗೊಳಿಸಿದ್ದಾರೆ. ಈಗ ಐದು ದಿನಗಳ ಕಾಲ
ಚಿಕ್ಕಮಗಳೂರಲ್ಲಿ “ದಿ ವಿಲನ್‌’ ಚಿತ್ರೀಕರಣ ನಡೆಯಲಿದೆ. ಹಾಗಾಗಿ, ಚುಮು ಚುಮು ಚಳಿಯ ಮಧ್ಯೆ ಹಾಟ್‌ ಬೆಡಗಿ ಆ್ಯಮಿ ಜಾಕ್ಸನ್‌ ಅನ್ನು ಕಣ್ತುಂಬಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next