Advertisement

10 ಸಾವಿರ ಮಾಸ್ಕ್ ತಯಾರಿಸಿದ ಅಮೂಲ್ಯ ದಂಪತಿ

10:09 AM Apr 23, 2020 | Suhan S |

ದೇಶಾದ್ಯಂತ  ಕೋವಿಡ್ 19 ಹಾವಳಿ ಹೆಚ್ಚಾಗಿದ್ದು, ಎಲ್ಲೆಡೆ ಮಾಸ್ಕ್ ಗಳಿಗೆ ಸಾಕಷ್ಟು ಬೇಡಿಕೆ ಉಂಟಾಗಿದೆ. ಇದೇ ವೇಳೆ ವೈದ್ಯರು ಹಾಗೂ ಪೊಲೀಸರಿಗಾಗಿ 10 ಸಾವಿರ ಮಾಸ್ಕ್ ತಯಾರಿಸಲು ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್‌ ದಂಪತಿ ಮುಂದಾಗಿದ್ದಾರೆ.

Advertisement

ಈ ಹಿಂದೆ ರಾಜ್ಯದ ನೆರೆ, ಬರ ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್‌ ಸಂಘಟನೆ ಜತೆ ಸೇರಿ 1 ಟನ್‌ ಅಕ್ಕಿ ನೀಡಿದ್ದ ನಟಿ ಅಮೂಲ್ಯ ದಂಪತಿ, ಈಗ ಮತ್ತೆ ಕೋವಿಡ್ 19  ನೆರವಿಗೆ ನಿಂತಿದ್ದಾರೆ. ತಮ್ಮ ಕಾರ್ಯದ ಬಗೆಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿರುವ ಜಗದೀಶ್‌ ಲಾಕ್‌ಡೌನ್‌ ಈ ಬಿಕ್ಕಟ್ಟಿನಲ್ಲಿ ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜರಾಜೇಶ್ವರಿ ನಗರದಿಂದ 25ಕ್ಕೂ ಹೆಚ್ಚು ಟೈಲರ್‌ ಗಳನ್ನು ನೇಮಿಸುವ ಮೂಲಕ ನಾವು ಪ್ರಸ್ತುತ 10000 ಮಾಸ್ಕ್ ಗಳನ್ನು ಉತ್ಪಾದಿಸುತ್ತಿದ್ದೇವೆ. ಈ ಮಾಸ್ಕ್ ಗಳನ್ನು ಅಗತ್ಯವಿರುವ ಎಲ್ಲಾ ಕೋವಿಡ್ 19  ಯೋಧರಿಗೆ ನೀಡಲಾಗುವುದು ಎಂದಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next