Advertisement

Amul Product: “ಅಮುಲ್‌ ಉತ್ಪನ್ನ ಆನ್‌ಲೈನ್‌ ಖರೀದಿ ಜನರ ಆಯ್ಕೆ”:ಶೋಭಾ ಕರಂದ್ಲಾಜೆ

11:18 PM Apr 07, 2023 | Team Udayavani |

ಬೆಂಗಳೂರು: ನಂದಿನಿ ಬ್ರಾಂಡ್‌ ಕರ್ನಾಟಕದ ಹೆಮ್ಮೆ. ಅದು ಮತ್ತಷ್ಟು ಬೆಳೆಯ ಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ರಾಜ್ಯದಲ್ಲಿ ಅಮುಲ್‌ ಹಾಲು, ಮೊಸರು ಆನ್‌ಲೈನ್‌ ಖರೀದಿ ಜನರ ಆಯ್ಕೆಗೆ ಬಿಟ್ಟ ವಿಚಾರ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Advertisement

ನಂದಿನಿ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಬಳಕೆಯ ದೃಷ್ಟಿಯಿಂದ ಮಾತ್ರವಲ್ಲ, ಅಮೂಲ್‌ಗಿಂತಲೂ ಕೆಎಂಎಫ್ ಇನ್ನಷ್ಟು ಬೆಳೆಯಬೇಕು. ಅದು ಸರಕಾರದ ಆದ್ಯತೆಯೂ ಹೌದು. ಆದರೆ ಅಮುಲ್‌ ಉತ್ಪನ್ನಗಳ ಆನ್‌ಲೈನ್‌ ಮಾರಾಟ ನಿರ್ಬಂಧಿಸಲು ಸಾಧ್ಯವಿಲ್ಲ. ಆನ್‌ಲೈನ್‌ ಖರೀದಿ ಜನರ ಆಯ್ಕೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ನೀಡಿರುವ ನಾಲ್ಕು ಸುಳ್ಳು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಒಂದು ಲಕ್ಷ ಕೋಟಿ ರೂ. ಬೇಕು. ಇದು ಅಸಾಧ್ಯವಾದ ಮಾತು. ಕಾಂಗ್ರೆಸ್‌ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎನ್ನುವುದು ಸುಳ್ಳು ಭರವಸೆ. ರಾಜಸ್ಥಾನದಲ್ಲಿ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ, ಅಲ್ಲಿನ ಪ್ರಣಾಳಿಕೆ ನೋಡಿ ಕಾಂಗ್ರೆಸ್‌ ಇಲ್ಲಿ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಜನರಿಗೆ ತಿಂಗಳಿಗೆ ಎಷ್ಟು ಧಾನ್ಯ ಬೇಕು, ಯಾವ ಧಾನ್ಯ ಬೇಕು ಎಂಬ ಸಮೀಕ್ಷೆ ಮಾಡಬೇಕಿದೆ. ಉಡುಪಿಯಲ್ಲಿ ಅಕ್ಕಿ ಕೊಟ್ಟರೆ ಬಳಸುವುದಿಲ್ಲ. ಅದೆಲ್ಲ ಬ್ಲ್ಯಾಕ್‌ ಮಾರ್ಕೆಟ್‌ಗೆ ಹೋಗುತ್ತದೆ. ಅದಕ್ಕೆ ನಾವು ಆ ಭಾಗದಲ್ಲಿ ಈಗ ಕುಚ್ಚಲಕ್ಕಿ ಕೊಡುತ್ತಿದ್ದೇವೆ. ದಕ್ಷಿಣ ಕನ್ನಡದಲ್ಲಿ ಕುಚ್ಚಲಕ್ಕಿ ಕೊಡಲಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಕೊಡಲಾಗುತ್ತಿದೆ. ಆಯಾ ಭಾಗದ ಜನರು ಬಳಸುವ ಧಾನ್ಯವನ್ನೇ ಕೊಡಬೇಕು ಆಗ ದುರುಪಯೋಗ ಕಡಿಮೆಯಾಗಲಿದೆ ಎಂದರು.
ಸಿದ್ದರಾಮಯ್ಯ ನಾನು ಅನ್ನಭಾಗ್ಯ ಯೋಜನೆಯ ರೂವಾರಿ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಆ ಯೋಜನೆಗೆ ಶೇ. 90 ಹಣ ಕೊಟ್ಟಿದ್ದು ಕೇಂದ್ರ ಸರಕಾರ. 32 ರೂ.ಗೆ ಅಕ್ಕಿ ಖರೀದಿಸಿ 3 ರೂ.ಗೆ ರಾಜ್ಯಕ್ಕೆ ಕಳುಹಿಸಿತ್ತು. ಕಳೆದ ತಿಂಗಳು 1.17 ಕೋಟಿ ಪಡಿತರ ಪಡೆದಿದ್ಧಾರೆ. 4 ಕೆ.ಜಿ. ಅಕ್ಕಿ, 2 ಕೆ.ಜಿ. ರಾಗಿ ಪಡೆದಿದ್ಧಾರೆ. ಆದ್ಯತಾ ಪಡಿತರ ಚೀಟಿ ಅಡಿಯಲ್ಲಿ ಯಾರೂ ಪಡಿತರದಿಂದ ವಂಚಿತರಾಗಬಾರದು ಎಂದು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಟಿಕೆಟ್‌ ವಿಚಾರ ನನ್ನ ವ್ಯಾಪ್ತಿಯಲ್ಲಿಲ್ಲ
ರಾಜ್ಯ ವಿಧಾನಸಭಾ ಚುನಾವಣೆ ಟಿಕೆಟ್‌ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಅದು ನನ್ನ ಪರಿಮಿತಿಯಲ್ಲಿಲ್ಲ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು. ಪ್ರಧಾನಿ ಮೋದಿ ಸಂಪುಟದಲ್ಲಿ ಹೆಚ್ಚಿನ ಮಹಿಳಾ ಸಚಿವರಿ¨ªಾರೆ. ಅದೇ ರೀತಿ ರಾಜ್ಯದಲ್ಲಿಯೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್‌ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next