Advertisement

ಹಾಲಿನ ದರ ಹೆಚ್ಚಳ ಮಾಡಿದ ಅಮುಲ್: ಹೊಸ ದರಗಳು ಇಂದಿನಿಂದಲೇ ಜಾರಿಗೆ

12:15 PM Feb 03, 2023 | Team Udayavani |

ಹೊಸದಿಲ್ಲಿ: ಕೆಲ ದಿನಗಳ ಹಿಂದೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಹೆಚ್ಚಿಸಿದಂತೆ ಇದೀಗ ಅಮುಲ್ ತನ್ನ ಹಾಲಿನ ದರ ಹೆಚ್ಚಿಸಿದೆ.

Advertisement

ಗುಜರಾತ್ ಡೈರಿ ಸಹಕಾರಿ ಅಮುಲ್ ಇಂದಿನಿಂದ ಜಾರಿಗೆ ಬರುವಂತೆ ತಾಜಾ ಹಾಲಿನ ಮೇಲೆ ಲೀಟರ್‌ಗೆ 3 ರೂ. ಹೆಚ್ಚಿಸಿದೆ. ಈ ಪರಿಷ್ಕರಣೆ ನಂತರ ಅಮುಲ್ ಗೋಲ್ಡ್ ಬೆಲೆ ಲೀಟರ್‌ ಗೆ 66 ರೂ. ಆಗಿದೆ.

ಅಮುಲ್ ತಾಜಾ ಲೀಟರ್‌ ಗೆ 54 ರೂ, ಅಮುಲ್ ಹಸುವಿನ ಹಾಲು ಲೀಟರ್‌ ಗೆ 56 ರೂ ಮತ್ತು ಅಮುಲ್ ಎ 2 ಎಮ್ಮೆಯ ಹಾಲಿಗೆ ಈಗ ಲೀಟರ್‌ ಗೆ 70 ರೂ.ಗಳಾಗಲಿದೆ ಎಂದು ಅಮುಲ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಕಲಾ ಸೇವೆಗೊಂದು ಗೌರವವಿರಲಿ… ಸಾವು-ನೋವಿನಲ್ಲೊಂದು ಸಾಂತ್ವನವಿರಲಿ…

ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ತನ್ನ ಡೈರಿ ಉತ್ಪನ್ನಗಳನ್ನು ಅಮುಲ್ ಬ್ರಾಂಡ್‌ನಲ್ಲಿ ಮಾರಾಟ ಮಾಡುತ್ತಿದೆ. ಅಕ್ಟೋಬರ್‌ ನಲ್ಲಿ ತನ್ನ ಗೋಲ್ಡ್, ತಾಜಾ ಮತ್ತು ಶಕ್ತಿ ಬ್ರಾಂಡ್‌ಗಳ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ ಗೆ 2 ರೂ. ಹೆಚ್ಚಿಸಿತ್ತು.

Advertisement

ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆಯ ವೆಚ್ಚದಲ್ಲಿ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ. ದನಗಳ ಮೇವಿನ ವೆಚ್ಚವೇ ಸರಿಸುಮಾರು 20 ಪ್ರತಿಶತಕ್ಕೆ ಏರಿದೆ ಎಂದು ಅಮುಲ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next