Advertisement

ಲವ್‌ ಮಾಕ್ಟೆಲ್‌ಗೆ ಅಮೃತಾ ಎಂಟ್ರಿ

05:47 AM Feb 04, 2019 | |

“ಮದರಂಗಿ’ ಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ ಎಂಬ ವಿಷಯ ಗೊತ್ತೆ ಇದೆ. ಆ ಚಿತ್ರಕ್ಕೆ “ಲವ್‌ ಮಾಕ್ಟೆಲ್‌’ ಎಂಬ ಹೆಸರಿಟ್ಟಿರುವುದೂ ಗೊತ್ತು. ಮಿಲನ ನಾಗರಾಜ್‌ ಆ ಚಿತ್ರದ ನಾಯಕಿ ಅನ್ನುವುದನ್ನೂ ಈ ಹಿಂದೆ ಹೇಳಲಾಗಿತ್ತು. ಆದರೆ, ಮದರಂಗಿ ಕೃಷ್ಣ ಚಿತ್ರದಲ್ಲಿ  ಮೂವರು ನಾಯಕಿಯರು ಎಂದು ಹೇಳಿದ್ದರು. ಆ ಪೈಕಿ ಒಬ್ಬರು ಮಾತ್ರ ಆಯ್ಕೆಯಾಗಿದ್ದು, ಇನ್ನಿಬ್ಬರ ಆಯ್ಕೆ ನಡೆಯುತ್ತಿದೆ ಎಂದು ಹೇಳಿದ್ದರು.

Advertisement

ಈಗ ಮತ್ತೂಬ್ಬ ನಾಯಕಿಯ ಆಯ್ಕೆಯಾಗಿದೆ. ಅದು ಅಮೃತಾ ಅಯ್ಯಂಗಾರ್‌. ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿರುವ ಅಮೃತಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ .ನಿರ್ದೇಶಕ ಕೃಷ್ಣ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಇದೊಂದು ಎಮೋಷನಲ್‌ ಲವ್‌ಸ್ಟೋರಿಯಾಗಿದ್ದು, ಮೂರು ಭರ್ಜರಿ ಆ್ಯಕ್ಷನ್‌ ಕೂಡ ಇಲ್ಲಿರಲಿದೆ.

ನಾಯಕನ ಬದುಕಿನಲ್ಲಿ ಮೂರು ಹಂತಗಳು ಬರಲಿದ್ದು, ಒಂದೊಂದು ಹಂತದಲ್ಲಿ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆ ಕಥೆ ಮೂಲಕ ನಾಯಕನ ಲೈಫ್ ಕೂಡ ಬದಲಾಗುತ್ತಾ ಹೋಗುತ್ತದೆ ಎನ್ನುತ್ತಾರೆ ಕೃಷ್ಣ. ಈ ಚಿತ್ರದಲ್ಲಿ ಮೂವರು ನಾಯಕಿಯರು ನಟಿಸುತ್ತಿದ್ದಾರೆ. ಆ ಮೂವರು ನಾಯಕಿಯರ ಪೈಕಿ ಮಿಲನ ನಾಗರಾಜ್‌ ಮತ್ತು ಅಮೃತಾ ಆಯ್ಕೆಯಾಗಿದ್ದಾರೆ. ಇನ್ನೊಬ್ಬ ನಾಯಕಿಗೆ ಹುಡುಕಾಟ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next