Advertisement

Amroha; ಮಾಂಸಹಾರಿ ಟಿಫಿನ್‌ ತಂದನೆಂದು 5 ವರ್ಷದ ಬಾಲಕನನ್ನು ಹೊರಹಾಕಿದ ಶಾಲಾ ಪ್ರಾಂಶುಪಾಲ

12:11 PM Sep 06, 2024 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ (Amroha) ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತರಗತಿಗೆ ಮಾಂಸಾಹಾರ ಊಟ ತಂದ ಆರೋಪದ ಮೇಲೆ ಐದು ವರ್ಷದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ್ದಾರೆ.

Advertisement

ಗುರುವಾರ, ಶಿಕ್ಷಕರ ದಿನದಂದು ಶಾಲಾ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಯ ತಾಯಿಯ ನಡುವೆ ನಡೆದ ತುಸು ಗರಂ ಮಾತುಕತೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಡಿಯೋದಲ್ಲಿ ಹಿಲ್ಟನ್ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿನಿ ನಿರಂತರವಾಗಿ ಮಾಂಸಾಹಾರ ತರುತ್ತಿದ್ದಾರೆ ಎಂದು ಹೇಳುತ್ತಿರುವುದು ಕೇಳಿಬರುತ್ತದೆ.

“ನಿಮ್ಮ ಮಗು ಮಾಂಸಾಹಾರವನ್ನು ತಿನ್ನುವಂತೆ ಮಾಡುವ ಮೂಲಕ ಎಲ್ಲರನ್ನು ಇಸ್ಲಾಂಗೆ ಪರಿವರ್ತಿಸಲು ಬಯಸುತ್ತದೆ ಎಂದು ಹೇಳುತ್ತದೆ” ಎಂದು ಪ್ರಾಂಶುಪಾಲರು ವೀಡಿಯೊದಲ್ಲಿ ತಾಯಿಗೆ ಹೇಳುತ್ತಾರೆ.

ತನ್ನ ತಾಯಿಯ ಪಕ್ಕದಲ್ಲಿ ನಿಂತಿರುವ ವಿದ್ಯಾರ್ಥಿಯನ್ನು ನೋಡಿದ ಪ್ರಾಂಶುಪಾಲರು, ಆತ ಹಿಂದೂ ದೇವಾಲಯಗಳನ್ನು ನಾಶಮಾಡಲು ಬಯಸುತ್ತಾನೆ ಎಂದು ಆರೋಪಿಸಿದ್ದಾರೆ.

Advertisement

ಕಳೆದ ಮೂರು ತಿಂಗಳಿನಿಂದ ಶಾಲೆಯ ವಿದ್ಯಾರ್ಥಿಗಳು ಹಿಂದೂ – ಮುಸ್ಲಿಂ ಭೇದ ಭಾವ ಮಾಡುತ್ತಿದ್ದಾರೆ ಎಂದು ನನ್ನ ಮಗ ದೂರುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಬೆಳಗ್ಗೆಯಿಂದ ನನ್ನ ಮಗನನ್ನು ಶಾಲೆಯಲ್ಲಿ ಕುಳಿತುಕೊಳ್ಳಲು ಬಿಡಲಿಲ್ಲ ಎಂದು ಆಕೆ ಆರೋಪಿಸಿದ್ದಾರೆ. “ಇನ್ನು ಅವನಿಗೆ ಕಲಿಸಲು ಸಾಧ್ಯವಿಲ್ಲ. ನಾವು ಆತನನ್ನು ಶಾಲೆಯಿಂದ ಹೊರಹಾಕಿದ್ದೇವೆ” ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ವೀಡಿಯೊ ವೈರಲ್ ಆಗುತ್ತಿದ್ದಂತೆ, ಅಮ್ರೋಹಿಯ ಮುಸ್ಲಿಂ ಸಮಿತಿಯು ಜಿಲ್ಲಾಧಿಕಾರಿಗೆ ಪತ್ರ ಬರೆದು, ಪ್ರಾಂಶುಪಾಲರನ್ನು ಬಂಧಿಸಬೇಕು ಮತ್ತು ಶಾಲೆಯ ಮಾನ್ಯತೆಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next