ಅಮೃತಸರ : ಖಲಿಸ್ಥಾನಿ ಪ್ರತ್ಯೇಕತಾವಾದಿ ಬೋಧಕ ಅಮೃತಪಾಲ್ ಸಿಂಗ್ ನ ಆಪ್ತ ಸಹಾಯಕ ಪಾಪಲ್ಪ್ರೀತ್ ಸಿಂಗ್ ನನ್ನು ಅಸ್ಸಾಂನ ದಿಲ್ಬುರ್ಗಾ ಜೈಲಿನಲ್ಲಿ ಇರಿಸಲಾಗುತ್ತದೆ. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿತ್ತು. NSA ಯಾವುದೇ ಆರೋಪವಿಲ್ಲದೆ ಒಂದು ವರ್ಷದವರೆಗೆ ಬಂಧನವನ್ನು ಅನುಮತಿಸುತ್ತದೆ.
ಅಮೃತಪಾಲ್ ಅವರ ಮಾರ್ಗದರ್ಶಕ ಎಂದು ಪರಿಗಣಿಸಲಾದ ಪಾಪಲ್ಪ್ರೀತ್ ಸಿಂಗ್ ವಿರುದ್ಧ ಇತರ ಆರು ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಅಮೃತಸರದಲ್ಲಿ ಬಂಧನಕ್ಕೊಳಗಾಗಿದ್ದ.
ಇದನ್ನೂ ಓದಿ : Amritpal Singh ಆಪ್ತ ಖಲಿಸ್ಥಾನ್ ಬೆಂಬಲಿಗ ಪಾಪಲ್ಪ್ರೀತ್ ಸಿಂಗ್ ಬಂಧನ
ಅಮೃತಪಾಲ್ ಸಿಂಗ್ ಮತ್ತು ಪಾಪಲ್ಪ್ರೀತ್ ಕಳೆದ ತಿಂಗಳು ಪೊಲೀಸರ ಬಲೆಯಿಂದ ನಾಟಕೀಯವಾಗಿ ತಪ್ಪಿಸಿಕೊಂಡ ನಂತರ ಒಟ್ಟಿಗೆ ಇದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
Related Articles
ಇಲ್ಲಿಯವರೆಗೆ, ಅಮೃತಪಾಲ್ ಸಿಂಗ್ ನ ಎಂಟು ಆಪ್ತ ಸಹಾಯಕರನ್ನು ಹೆಚ್ಚಿನ ಭದ್ರತೆಯ ದಿಬ್ರುಗಢ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ ಮತ್ತು ಅವರೆಲ್ಲರ ವಿರುದ್ಧ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.