ಅಮೃತಸರ: ನೂರಾರು ಪ್ರತಿಭಟನಾಕಾರರು ಬಿಡುಗಡೆಗೆ ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಒಂದು ದಿನದ ನಂತರ ಖಲಿಸ್ತಾನ್ ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ಸಹಾಯಕ ಮತ್ತು ಅಪಹರಣ ಆರೋಪಿ ಲವ್‌ಪ್ರೀತ್ ಸಿಂಗ್ ‘ತೂಫಾನ್’ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಅಜ್ನಾಲಾ ನ್ಯಾಯಾಲಯವು ಪೊಲೀಸರ ಅರ್ಜಿಯ ಆಧಾರದ ಮೇಲೆ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಿದ ಗಂಟೆಗಳ ನಂತರ ಲವ್‌ಪ್ರೀತ್ ಸಿಂಗ್ ನನ್ನು ಅಮೃತಸರ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಗುರುವಾರ, ಖಲಿಸ್ತಾನ್ ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್ ಬೆಂಬಲಿಗರಲ್ಲಿ ಕೆಲವರು ಕತ್ತಿ ಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್‌ಗಳನ್ನು ಮುರಿದು, ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾದಲ್ಲಿ ಪೊಲೀಸ್ ಠಾಣೆಗೆ ನುಗ್ಗಿದ್ದರು. ಈ ವೇಳೆ ಲವ್‌ಪ್ರೀತ್ ಸಿಂಗ್ ರನ್ನು ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರಿಂದ ಭರವಸೆ ಪಡೆದಿದ್ದರು.
ಪಂಜಾಬ್ ಪೊಲೀಸರು ನಂತರ ಲವ್‌ಪ್ರೀತ್ ಸಿಂಗ್ ಅವರನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು, ತನಿಖೆಯಲ್ಲಿ ಅಪರಾಧ ನಡೆದಾಗ ಅವರು ಸ್ಥಳದಲ್ಲಿ ಇರಲಿಲ್ಲ ಎಂದು ಕಂಡುಬಂದಿದೆ.
ಶುಕ್ರವಾರ ಇಲ್ಲಿನ ಅಜ್ನಾಲಾ ಪೊಲೀಸ್ ಠಾಣೆ ಮತ್ತು ಅಜ್ನಾಲಾ ಪಟ್ಟಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಲವ್‌ಪ್ರೀತ್ ಸಿಂಗ್ ಜೈಲಿನಿಂದ ಹೊರಬಂದಾಗ ಬೆಂಬಲಿಗರು ಸ್ವಾಗತಿಸಿದರು.ಇದಕ್ಕೂ ಮೊದಲು, ನ್ಯಾಯಾಲಯವು ತನ್ನ ಆದೇಶವನ್ನು ಹೊರಡಿಸಿದ ನಂತರ, ಅಮೃತಪಾಲ್ ಸಿಂಗ್ ತನ್ನ ಸಹಾಯಕನ ಬಿಡುಗಡೆಯನ್ನು “ಪಂಥ್ ವಿಜಯ” ಎಂದು ಸುದ್ದಿಗಾರರಿಗೆ ತಿಳಿಸಿದರು.
ಸರಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ
ಘಟನೆಯ ಬಳಿಕ ಸರಕಾರ ಯಾಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಎದ್ದಿದೆ. ಆಕ್ರೋಶವೂ ವ್ಯಕ್ತವಾಗಿದೆ. ಸ್ವಯಂಘೋಷಿತ ಸಿಖ್ ಬೋಧಕರು ಗುರು ಗ್ರಂಥ ಸಾಹಿಬ್‌ನ ಪ್ರತಿಯನ್ನು ಪೊಲೀಸ್ ಠಾಣೆಗೆ ತಂದಿದ್ದರಿಂದ ಘರ್ಷಣೆಯ ಸಮಯದಲ್ಲಿ ಪೊಲೀಸರು ತಮ್ಮನ್ನು ತಾವು ತಡೆಹಿಡಿದಿದ್ದಾರೆ ಎಂದು ಎಎಪಿ ಸಚಿವರು ಸ್ಪಷ್ಟನೆ ನೀಡಿದ್ದಾರೆ.