ಹುಣಸೂರು:ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ತಾಲೂಕಿನ ಗಾವಡಗೆರೆಯ ಶ್ರೀ ಶಿವಛತ್ರಪತಿ ಮರಾಠ ಶ್ರೇಯೋಭಿವೃದ್ದಿ ಸಮಿತಿಯು ೪೫ಕ್ಕೂ ಹೆಚ್ಚು ವೀರಯೋಧರಿಗೆ ಸನ್ಮಾನಿಸುವ ಸಂಭ್ರಮಾಚರಣೆ ನಡೆಯಿತು.
ಸೈನಿಕರ ಗ್ರಾಮವೆಂದೇ ಹೆಸರಾಗಿರುವ ಗಾವಡಗೆರೆಗ್ರಾಮದ ಮರಾಠ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಬ್ರಿಗೇಡಿಯರ್ ವಿಶ್ವಾಸ್‌ರಾವ್ ಕದಂ ಧ್ವಜಾರೋಹಣ ನೆರವೇರಿಸಿ ಮಾತನ್ನಾಡಿ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
ಯುವ ಪಿಳಿಗೆಗೆ ದೇಶ ಭಕ್ತಿ ಹಾಗೂ ದೇಶ ಸೇವೆ ಮಾಡುವ ಯಾವುದೇ ಹುದ್ದೆಗಳನ್ನ ಗೌರವಿಸುವಂತೆ ಮತ್ತು ಸೈನ್ಯಕ್ಕೆ ಸೇರುವಂತೆ ಪ್ರೇರೆಪಿಸಿದರು.
ನಿವೃತ್ತ ಯೋಧ ಕಿಶೋರ ಕದಂ ಮಾತನಾಡಿ ಗಡಿಭಾಗದಲ್ಲಿ ಸೈನಿಕರು ಪಡುವ ಶ್ರಮದ ಕುರಿತು ವಿವರಿಸಿ ಪ್ರತಿಯೊಬ್ಬ ಭಾರತಿಯ ಯೋಧರಿಗೆ ಇಂತಹ ಗೌರವ ಸಿಗಬೇಕಾಗಿದೆ ಎಂದು ತಮ್ಮ ಸೇವಾ ದಿನಗಳನ್ನು ಸ್ಮರಿಸಿದರು ಸೈನಿಕರು ಸೇರಿ ಹೃದಯ ತಜ್ಙ ಡಾ.ಮುರುಳಿರಾವ್ ಅವರ ಆಶಯದಂತೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನವಾಗಿ ಇ.ಸಿ.ಜಿ ಯಂತ್ರವನ್ನು ಕೊಡುಗೆಯಾಗಿ ನೀಡುವುದಾಗಿ ಭರವಸೆ ಇತ್ತರು. ಅಧ್ಯಕ್ಷತೆವಹಿಸಿದ್ದ ಸಮಿತಿ ಅದ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ಸಂಘಟನಾ ಕಾರ್ಯದರ್ಶಿ ಜಿ.ವಿ.ಶ್ರೀನಾಥ್ ಮಾತನಾಡಿದರು.
ಸಬೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಅನ್ನಪೂರ್ಣಬಾಯಿ, ಕಾರ್ಯಾದ್ಯಕ್ಷ ವೀರೇಶ್‌ರಾವ್, ಉಪಾದ್ಯಕ್ಷ ನಾಗರಾಜ್‌ರಾವ್ ಮಠಾಲೆ, ಹಿರಿಯ ಮುಖಂಡರಾದ ಮಹದೇವ್‌ರಾವ್‌ಬಾಗಲ್, ಖಜಾಂಜಿ ಕೃಷ್ಣರಾವ್‌ಕದಂ, ರಮೇಶ್‌ರಾವ್ ಘಾಟ್ಕೆ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಾಥ್.ಪಿ, ಧರ್ಮಸ್ಥಳದ ತಾಲೂಕು ಸಂಯೋಜಕ ರಮೇಶ ಹಾಗೂ ಸಮಿತಿ ಪಾದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.