Advertisement
ಬೀರವಳ್ಳಿ ಗ್ರಾಮ ಪಂಚಾಯಿತಿ ಧಾರವಾಡ ಜಿಲ್ಲಾ ಕೇಂದ್ರದಿಂದ 55ಕಿ.ಮೀ ದೂರದಲ್ಲಿ ಹಾಗೂ ಕಲಘಟಗಿ ತಾಲೂಕು ಕೇಂದ್ರದಿಂದ 22ಕಿ.ಮೀ ದೂರವಿದ್ದು,ಇದು ತಬಕದಹೊನ್ನಳ್ಳಿ ಹೋಬಳಿಗೆ ಸೇರುತ್ತದೆ. 1987-88ನೇ ಸಾಲಿನಲ್ಲಿ ಬೀರವಳ್ಳಿ ಗ್ರಾಮ ಪಂಚಾಯಿತಿ ತಬಕದಹೊನ್ನಳ್ಳಿ ಮತ್ತು ವ್ಯಾಪ್ತಿಯ ಆಸ್ತಕಟ್ಟಿ ಗ್ರಾಮ ಬಮ್ಮಿಗಟ್ಟಿ ಮಂಡಳ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತಿತ್ತು. ಪ್ರಸ್ತುತ ಈ ಗ್ರಾಮ ಪಂಚಾಯಿತಿಯು ಬೀರವಳ್ಳಿ, ಬೆಂಡಲಗಟ್ಟಿ, ಆಸ್ತಕಟ್ಟಿ ಗ್ರಾಮಗಳನ್ನು ಒಳಗೊಂಡಿರುತ್ತದೆ.
Related Articles
Advertisement
ತಾಲೂಕು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಾದಿಯಾಗಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರ ಸಹಕಾರದ ಪ್ರತಿಫಲವಾಗಿ 75ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ಸರಕಾರವು ಅಮೃತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಯ ಪುರಸ್ಕಾರ ಲಭಿಸಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಸ್.ಬಿ. ಸುಬರಗಟ್ಟಿ ಸಂತಸ ವ್ಯಕ್ತಪಡಿಸುತ್ತಾರೆ.
ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಯಡಿ ಅಂಗನವಾಡಿಗಳ ರಕ್ಷಣಾ ಗೋಡೆ, ಗ್ರಂಥಾಲಯ, ಸರಕಾರಿ ಶಾಲೆಗಳ ಮೈದಾನ ಹಾಗೂ ಶಾಲಾ ರಕ್ಷಣಾ ಗೋಡೆ, ಕಸ ವಿಲೇವಾರಿ ಘಟಕ, ಬೂದು ನೀರು ನಿರ್ವಹಣೆಯಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಗ್ರಾ.ಪಂ. ವ್ಯಾಪ್ತಿಯಾದ್ಯಂತ ಸ್ವತ್ಛತೆ ಮತ್ತು ಸೌಂದರ್ಯೀಕರಣದ ಪರ್ವ ತೋರಿ ಬರುತ್ತಲಿದೆ.
ಗ್ರಾಮಗಳ ಮೆರಗನ್ನು ಮತ್ತು ಹಿರಿಮೆಯನ್ನು ಹೆಚ್ಚಿಸಲು ಈ ಕೆಳಕಂಡ ಕಾಮಗಾರಿಗಳು ಸಹಕಾರಿಯಾಗಿವೆ
*ಬೀರವಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ.*ಬೀರವಳ್ಳಿ ಗ್ರಾಮ ಪಂಚಾಯಿತಿ ಸಾರ್ವಜನಿಕ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ.
*ಆಸ್ತಕಟ್ಟಿ ಗ್ರಾಮದ ಮೈದಾನಕ್ಕೆ ಮೆಟ್ಟಿಲುಗಳ ನಿರ್ಮಾಣ, ಆಸ್ತಕಟ್ಟಿ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ.
*ಬೆಂಡಲಗಟ್ಟಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಮೈದಾನಕ್ಕೆ ರಕ್ಷಣಾ ಗೋಡೆ ನಿರ್ಮಾಣ.
*ಬೀರವಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಮೂಲಭೂತ ಸೌಕರ್ಯ.
*ಬೀರವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿದಿನ ಕಸ ಸಂಗ್ರಹಣೆ ಮತ್ತು ವಿಲೇವಾರಿ.
*292 ಬೀದಿದೀಪಗಳ ನಿರ್ವಹಣೆ.
*ಬೆಂಡಲಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ.
*ಗ್ರಾ.ಪಂ. ವ್ಯಾಪ್ತಿಯ 6 ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ಮುದ್ದು ಮಕ್ಕಳಿಗೆ ಕುಳಿತುಕೊಳ್ಳಲು ಆಸನ ಮತ್ತು ಟೇಬಲ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರೆಲ್ಲರ ಶ್ಲಾಘನೆಗೆ ಕಾರಣವಾಗಿದೆ.