ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾತಂತ್ರೋತ್ಸವ ಭಾಷಣದಲ್ಲಿ ತಿಳಿಸಿದ್ದ “ಅಮೃತ ಸಮುದಾಯ ಅಭಿವೃದ್ಧಿ’ ಯೋಜನೆಗೆ ಅನುಷ್ಠಾನಕ್ಕೆ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಯೋಜನೆಯಲ್ಲಿ ಎನ್ನೆಸ್ಸೆಸ್ ಸ್ವಯಂ ಸೇವಕರೇ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ| ನಾರಾಯಣ ಗೌಡ ಹೇಳಿದ್ದಾರೆ.
2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 30 ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಈ ಪೈಕಿ 750 ಹಳ್ಳಿಗಳಲ್ಲಿ ಸುಮಾರು 1,27,369 ಕುಟುಂಬಗಳು ಅತಿ ಬಡತನದಲ್ಲಿವೆ. ಅಂತಹ ಕುಟುಂಬಗಳಿಗೆ ಸರಕಾರದ ಯೋಜನೆಗಳನ್ನು ತಲುಪಿಸಿ ಬಡತನ ರೇಖೆಗಿಂತ ಮೇಲೆತ್ತಲು ಈ ಯೋಜನೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಎನ್ನೆಸ್ಸೆಸ್ ಮೂಲಕ 750 ಗ್ರಾಮ ದತ್ತು :
ಗುರುತಿಸಿರುವ 750 ಗ್ರಾಮಗಳನ್ನು ಎನ್ನೆಸ್ಸೆಸ್ ಘಟಕಗಳ ಮೂಲಕ ದತ್ತು ಸ್ವೀಕರಿಸಿ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿ ಈ ಕುಟುಂಬಗಳಿಗೆ ಅಗತ್ಯವಿರುವ ಯೋಜನೆಗಳನ್ನು ನೇರವಾಗಿ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದ್ದಾರೆ.