Advertisement
ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಡಾ. ಅಮೃತ ಸೋಮೇಶ್ವರರು ಹೀಗೆ ಹೇಳಿದ್ದುಂಟು- “ನನ್ನದು ಗೂಡಂಗಡಿ. ನನಗೆ ಗೂಡಂಗಡಿ ಬೇರದಲ್ಲಿಯೇ ಆಸಕ್ತಿ. ರಖಂ ವ್ಯಾಪಾರ ನನ್ನದಲ್ಲ’. ಇಲ್ಲಿ ಗೂಡಂಗಡಿ ಎಂಬ ಪರಿಕಲ್ಪನೆಯೇ ಬಹಳ ಅರ್ಥಪೂರ್ಣವಾದುದು. ಇವತ್ತು ಅಮೃತರ ಗೂಡಂಗಡಿಯಲ್ಲಿ ಸಿಗುವ ವಸ್ತುಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಗೂಡಂಗಡಿಯ ಗ್ರಹಿಕೆ ಹಾಗೆಯೇ ಉಳಿದಿದೆ. ಗೂಡಂಗಡಿಯಲ್ಲಿ ನಡೆಯುವ ಕೊಡು-ಕೊಳ್ಳುವಿಕೆಯ ಹಿಂದಿರುವ ಮನೋಧರ್ಮವು ನಗರದಲ್ಲಿರುವ ಮಾಲ್ ಸಂಸ್ಕೃತಿಯ ಮನೋಧರ್ಮಕ್ಕೆ ವಿರುದ್ಧವಾದುದು. ನನ್ನ ದೃಷ್ಟಿಯಲ್ಲಿ ಅಮೃತರ ಸ್ವಭಾವವನ್ನು , ದೇಸೀ ಪ್ರಜ್ಞೆಯನ್ನು , ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ರೂಪಕವೇ ಗೂಡಂಗಡಿ.
ಯಕ್ಷಗಾನ ಮಹಾಸಂಪುಟ, ತುಳು ನಾಟಕ ಮಹಾಸಂಪುಟ, ತುಳು ಪಾಡªನ ಮಹಾಸಂಪುಟ- ಹೀಗೆ ಹಲವು ಮಹಾಸಂಪುಟಗಳನ್ನು ನೀಡಿರುವ ಅಮೃತರಿಗೆ ಇದೀಗ ತುಳುವಿನಲ್ಲಿ ಮಹಾಕಾವ್ಯ ಸಂಪುಟವನ್ನು ರಚಿಸುವ ಬಯಕೆ ಹುಟ್ಟಿದುದು ಬರಿಯ ಚೋದ್ಯವಲ್ಲ. ಅವರಲ್ಲಿರುವ ನಿರಂತರ ಪ್ರತಿಭಾನ್ವೇಷಣೆಗೆ ಸಾಕ್ಷಿಯಾಗುವ ಅವರ ಮನದಾಳದ ಮಾತದು.
Related Articles
Advertisement
ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಕನ್ನಡ ಮತ್ತು ತುಳುವಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳಿಗೆ ಅಮೃತರು ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತ ಬಂದಿದ್ದಾರೆ. ಈ ಅವಧಿಯನ್ನು ಅಮೃತರು ಕಂಡಿದ್ದಾರೆ, ಈ ಅವಧಿ ಅಮೃತರನ್ನು ಕಂಡಿದೆ. ತುಳುವಿನ ಸಾಂಸ್ಕೃತಿಕ ಪುನರುತ್ಥಾನದ ನೆಲೆಯಲ್ಲಿ ನೋಡಿದರೆ ಅಮೃತರ ಬರಹಗಳು ಬಹಳ ಮುಖ್ಯವಾಗುತ್ತವೆ. ತುಳು ಬದುಕು ಎಂಬುದು ಅವರ ಒಂದು ಕೃತಿಯ ಹೆಸರು. ತುಳು ಒಂದು ಬದುಕು ಮತ್ತು ಅಂತಹ ತುಳು ಬದುಕಿ ಬಾಳಬೇಕೆಂಬುದು ಅವರ ತುಳು ಬರಹಗಳ ಬಹಳ ಮುಖ್ಯ ಆಶಯ. ಮಾನವತೆ ಗೆ¨ªಾಗ ಎಂಬುದು ಅವರ ಒಂದು ಕಥಾಸಂಕಲನದ ಹೆಸರು. ಮಾನವತೆ ಗೆಲ್ಲಬೇಕೆಂಬುದು ಅವರ ನಿಲುವು. ತುಳುವಿನ ಬಗೆಗಿನ ಅವರ ಎಲ್ಲ ಬರಹಗಳನ್ನು ಒಟ್ಟಾಗಿ ತುಳುವ ಸಂಸ್ಕೃತಿ ಚಿಂತನೆಯ ಮಹಾಸಂಕಥನ ಎಂದು ನೋಡಬಹುದು.
ಲೌರಿ ಹಾಂಕೋರವರ ವಿಶ್ಲೇಷಣೆಅಮೃತರು ತುಳು ಜಾನಪದಕ್ಕೆ ಸಂಬಂಧಪಟ್ಟಂತೆ ಮಾಡಿರುವ ಕೆಲಸಗಳನ್ನು ನೋಡಿದರೆ, ಪ್ರೊ. ಲೌರಿ ಹಾಂಕೋ ಅವರ ಫೋಕ್‌ಲೋರ್ ಪ್ರೋಸೆಸ್ ಲೇಖನದ ನೆನಪಾಗುತ್ತದೆ. ಹಾಂಕೋ ಅವರು ಆ ಲೇಖನದಲ್ಲಿ ಜಾನಪದದ ಸ್ವರೂಪ ಮತ್ತು ಅಧ್ಯಯನ ಇತಿಹಾಸವನ್ನು ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಹಳೆಯ ಪಳೆಯುಳಿಕೆಗಳ ಸಂಗ್ರಹದಿಂದ ಆರಂಭವಾಗಿ ಮಾನವ ಸಮುದಾಯಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯ ವರೆಗೆ ಜಾನಪದವು ಸಾಗಿಬಂದಿರುವ ಹಾದಿಯನ್ನು ವಿಶ್ಲೇಷಿಸಿದ್ದಾರೆ. ಯಕ್ಷಗಾನ ಮತ್ತು ತುಳು ಜಾನಪದಕ್ಕೆ ಸಂಬಂಧಪಟ್ಟಂತೆ ಅಮೃತರು ಮಾಡಿರುವ ಕೆಲಸಗಳು ಮತ್ತು ಹಾಂಕೋ ವಿವರಿಸಿರುವ ಜಾನಪದ ಪ್ರಕ್ರಿಯೆಯು ಪರಸ್ಪರ ಹೊಂದಿಕೆಯಾಗುತ್ತವೆ. ಹಳೆಯ ಪಳೆಯುಳಿಕೆಗಳ ಸಂಗ್ರಹದಿಂದ ಅಮೃತರ ಕೆಲಸ ಆರಂಭವಾಗುತ್ತದೆ. ಯಕ್ಷಗಾನ ಮತ್ತು ತುಳು ಜಾನಪದಕ್ಕೆ ಸಂಬಂಧಪಟ್ಟಂತೆ ಅಮೃತರ ಗ್ರಂಥಗಳಲ್ಲಿರುವ ಮಾಹಿತಿಗಳು ಅಪೂರ್ವವಾಗಿವೆ. ಅಮೃತರು ಸಂಗ್ರಹಿಸಿರುವ ಮಾಹಿತಿಗಳು ಎಲ್ಲಾ ಕಾಲಕ್ಕೂ ಮುಖ್ಯವಾಗುತ್ತವೆ. ಜಾನಪದ ಮತ್ತು ಯಕ್ಷಗಾನದ ವ್ಯಾಖ್ಯಾನಗಳು ಬದಲಾಗಬಹುದು. ಆದರೆ ಅಮೃತರು ಸಂಗ್ರಹಿಸಿಕೊಟ್ಟಿರುವ ಮಾಹಿತಿಗಳು ಮುಂದೆಯೂ ಆಕರಗಳಾಗಿ ಉಳಿಯುತ್ತವೆ. ಯಕ್ಷಗಾನ ಮತ್ತು ತುಳು ಜಾನಪದದ ವಕõಗಳು ಮತ್ತು ಕಲಾವಿದರನ್ನು ಅಮೃತರು ಬಹಳ ಗೌರವದಿಂದ ಕಾಣುತ್ತ ಬಂದಿದ್ದಾರೆ. ಕಲಾವಿದರನ್ನು ಅರ್ಥಪೂರ್ಣವಾಗಿ ಸನ್ಮಾನಿಸಿದ್ದಾರೆ. ಯಕ್ಷಗಾನ ಸಂಘ ಗಳನ್ನು ಕಟ್ಟಿ, ಕಲಾವಿದರಿಗೆ ತರಬೇತು ನೀಡಿದ್ದಾರೆ. ಯಕ್ಷಗಾನದ ವೇಷಭೂಷಣಗಳನ್ನು ಮರುಕಲ್ಪಿಸಿದ್ದಾರೆ. ಜಾನಪದದ ವಿನ್ಯಾಸಗಳನ್ನು ತಮ್ಮ ಮನೆಯಲ್ಲಿ ಕಿಟಿಕಿ ಬಾಗಿಲುಗಳಿಗೆ ಆನ್ವಯಿಕವಾಗಿ ಬಳಸಿಕೊಂಡಿದ್ದಾರೆ. ಬಹಳ ಮುಖ್ಯ ಸಂಗತಿಯೆಂದರೆ, ಲೌರಿ ಹಾಂಕೋ ಜಾನಪದ ಪ್ರಕ್ರಿಯೆಯನ್ನು ಸೈದ್ಧಾಂತಿಕವಾಗಿ ಮಂಡಿಸುವ ಮೊದಲೇ ಅಮೃತರು ಜಾನಪದದ ಸಂಗ್ರಹ, ಸಂರಕ್ಷಣೆ, ಅಧ್ಯಯನ, ಪ್ರಕಟನೆ, ಪ್ರಸಾರ, ಆನ್ವಯಿಕತೆ, ನೈತಿಕತೆ ಮೊದಲಾದ ಅಂಶಗಳ ಕುರಿತಂತೆ ಗಂಭೀರ ಚಿಂತನೆ ನಡೆಸಿದ್ದಾರೆ. ಕರಾವಳಿಯ ಆರಾಧನೆ, ಯಕ್ಷಗಾನ ಮತ್ತು ಇತರ ರಂಗಪ್ರದರ್ಶನ ಕಲೆಗಳ ರಂಗಗಳ ಕುರಿತಂತೆ ಶೈಕ್ಷಣಿಕವಾಗಿ ದುಡಿದ ನಮ್ಮ ನಾಡಿನ ಮತ್ತು ಹೊರದೇಶಗಳ ವಿದ್ವಾಂಸರಿಗೆ ಕಳೆದ ಐವತ್ತು ವರ್ಷಗಳಿಂದ ಅಮೃತರು ಅರಿವಿನ ಗುರುವಾಗಿ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಸಾಹಿತ್ಯ, ಜಾನಪದ, ಯಕ್ಷಗಾನ ರಂಗಗಳಲ್ಲಿ ದುಡಿದು ಹೆಸರು ಮಾಡಿದ ದೊಡ್ಡ ವಿದ್ಯಾರ್ಥಿ ಬಳಗವನ್ನು ಹೊಂದಿದ್ದಾರೆ. ಮಾರ್ತಾ ಆ್ಯಷ್ಟನ್, ಪೀಟರ್ ಜೆ. ಕ್ಲಾಸ್, ಫ್ರಾಂಕ್ ಕೊರೋಮ್, ಹೈಡ್ರೂನ್ ಬ್ರೂಕ್ನರ್, ಕ್ಯಾಥರಿನ್ ಫಿಶರ್, ಲೌರಿ ಹಾಂಕೋ, ಆಸ್ಕೋ ಪರ್ಪೊಲ, ಬೆಂಟೆ ಆಲ್ವೆರ್, ಸುಮಿಯೋ ಮೊರಿಜಿರಿ- ಹೀಗೆ ಅಮೃತರ ಜೊತೆ ಸಂವಾದ ನಡೆಸಿದ ವಿದೇಶಿ ವಿದ್ವಾಂಸರು ಹಲವರಿದ್ದಾರೆ. ಬೇರೆ ಬೇರೆ ರಾಜ್ಯಗಳ ಸಾಹಿತಿಗಳು, ಸಂಶೋಧಕರು, ರಂಗತಜ್ಞರು ಕರಾವಳಿ ರಂಗಭೂಮಿ ಮತ್ತು ಸಂಸ್ಕೃತಿಯ ಕುರಿತಂತೆ ಮಾಹಿತಿಗಳನ್ನು ಅಮೃತರಿಂದ ಸಂಗ್ರಹಿಸಿದ್ದಾರೆ. ಕರಾವಳಿ ಜಾನಪದ ಮತ್ತು ಯಕ್ಷಗಾನದ ಕುರಿತ ಮಾಹಿತಿಗಳನ್ನು ಮಾತ್ರವಲ್ಲ, ಒಳನೋಟಗಳನ್ನು ಯಾವುದೇ ಪ್ರತಿಫಲಗಳ ಅಪೇಕ್ಷೆಯಿಲ್ಲದೆ ಅಮೃತರು ಹಂಚುತ್ತ ಬಂದಿದ್ದಾರೆ. ಜ್ಞಾನವನ್ನು ಅಮೃತರು ಮಾರಾಟ ಮಾಡಿದವರಲ್ಲ; ಹಂಚಿ ಸಂತೋಷ ಪಟ್ಟವರು. ಆಲೋಚನೆಗಳು ಮಾರಾಟಕ್ಕಿರುವ ಈ ಕಾಲಘಟ್ಟದಲ್ಲಿ ಅಮೃತರ ನಡೆ ವಿಶಿಷ್ಟವಾದುದು. ಅಮೃತರಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ, ಸನ್ಮಾನಗಳು ಆಗಿವೆ. ಆದರೂ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೇಂದ್ರ ಸಂಗೀತ-ನಾಟಕ ಅಕಾಡೆಮಿಗಳ ಗೌರವ ಅಮೃತರಿಗೆ ಬರಬಹುದಾಗಿತ್ತೇನೋ… ಪ್ರಶಸ್ತಿಗಳಿಗಾಗಿ ಅಮೃತರು ಆಸೆ ಪಟ್ಟವರಲ್ಲ. ಅವರಿಗೆ ಬಂದ ಪ್ರಶಸ್ತಿಗಳು ಅವರು ಅರಸಿ ಬಂದವುಗಳಲ್ಲ; ತುಳು ಕನ್ನಡಿಗರು ಹರಸಿ ನೀಡಿದವುಗಳು. ಕೆ. ಚಿನ್ನಪ್ಪ ಗೌಡ