ಉಡುಪಿ: ಉಡುಪಿ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಮಾತಾ ಅಮೃತಾನಂದಮಯಿ ಅವರ ಅಮೃತ ವೈಭವ ಕಾರ್ಯಕ್ರಮಕ್ಕಾಗಿ ಹೊರೆಕಾಣಿಕೆ ಅರ್ಪಣಾ ಕಾರ್ಯಕ್ರಮ ಫೆ. 24ರಂದು ಜರಗಿತು.
ನಾಯರ್‌ಕೆರೆಯಿಂದ ಮೆರವಣಿಗೆ ಆರಂಭಗೊಂಡಿತು.ಅಮೃತ ವೈಭವ ಜರಗುವ ಎಂಜಿಎಂ ಮೈದಾನದತನಕ 50 ಕ್ವಿಂಟಲ್ ಅಕ್ಕಿ, 10 ಕ್ವಿಂಟಲ್ ಬೆಲ್ಲ, 10 ಕ್ವಿಂಟಲ್ ಕುಂಬಳಕಾಯಿಯನ್ನು ಮೆರವಣಿಗೆಯಲ್ಲಿ ತರಲಾಯಿತು. ಮೆರವಣಿಗೆಯಲ್ಲಿ ಕಾರುಗಳು ಸಾಲಾಗಿ ಪಾಲ್ಗೊಂಡವು.
ಹೊರೆಕಾಣಿಕೆ ಅರ್ಪಣಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಜಿಲ್ಲಾ ಕಾಂಗ್ರೆಸ್ ಭವನದ ಎದುರು ಉದ್ಘಾಟಿಸಿದರು.
ಮೂರು ಲಕ್ಷ ರೂ. ದೇಣಿಗೆ
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ ಶೆಟ್ಟಿ ಅಮೃತ ವೈಭವ ಕಾರ್ಯಕ್ರಮಕ್ಕೆ ಮೂರು ಲಕ್ಷ ರೂಪಾಯಿ ದೇಣಿಗೆ ನೀಡಿದರು.
ಹೊರೆಕಾಣಿಕೆ ಅರ್ಪಣಾ ಕಾರ್ಯಕ್ರಮದಲ್ಲಿ ಅಮೃತ ವೈಭವ ಸ್ವಾಗತ ಸಮಿತಿ ಅಧ್ಯಕ್ಷ ಆನಂದ ಕುಂದರ್, ಕಾಂಗ್ರೆಸ್ ಮುಖಂಡರಾದ ಜನಾರ್ದನ ತೋನ್ಸೆ, ನರಸಿಂಹಮೂರ್ತಿ, ಸತೀಶ್ ಅಮೀನ್ ಪಡುಕರೆ, ಪ್ರಖ್ಯಾತ ಶೆಟ್ಟಿ , ದಿನೇಶ್ ಪುತ್ರನ್, ಅಮೃತ ಶೆಣೈ, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಯಶ್ರೀ , ಸಮಿತಿಯ ಶ್ರೀಧರ ಕಿನ್ನಿಮೂಲ್ಕಿ ಉಪಸ್ಥಿತರಿದ್ದರು.