ಕಲ್ಲಿಕೋಟೆ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಪೈಲಟ್‌ಗಳು ಹಾಗೂ ಸಹ ಪ್ರಯಾಣಿಕರು ಸೇರಿ ಒಟ್ಟು 16 ಮಂದಿ ಸಾವನ್ನಪ್ಪಿರುವುದಾಗಿ ಡಿಜಿಸಿಎ ಮತ್ತು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನಕ್ಕೆ ಬೆಂಕಿ ಹಿಡಿಯದೇ ಇರುವ ಕಾರಣ ಭಾರೀ ದೊಡ್ಡ ಅನಾಹುತ ಕೈ ತಪ್ಪಿದೆ. ಇಂತಹ ಸಂದರ್ಭ ವಿಮಾನಗಳಿಗೆ ಬೆಂಕಿ ತಗುಲುವ ಸಾಧ್ಯತೆ ಹೆಚ್ಚು ಇರುತ್ತದೆ. ಗಾಯಗೊಂಡವರನ್ನು ಸ್ಥಳೀಯ ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಲ್ಲಿನ ಸಾಮರ್ಥ್ಯವನ್ನು ಪರಿಗಣಿಸಿ ಕೆಲವು ಪ್ರಯಾಣಿಕರನ್ನು ನೆರೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪರಿಹಾರ ಕಾರ್ಯ ಮುಂದುವರೆದಿದೆ. ಆಸ್ಪತ್ರೆಗಳಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಗಾಯಗೊಂಡ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಗಂಭೀರ ಗಾಯಗೊಂಡವರ ಆರೋಗ್ಯ ಚಿಂತಾಜನಕವಾಗಿದೆ. ಮೃತಪಟ್ಟವರಲ್ಲಿ ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ಖಚಿತಪಡಿಸಿದೆ.
ಪ್ರಯಾಣಿಕರ ಪಟ್ಟಿ ಬಿಡುಗಡೆಗೊಂಡಿದ್ದು ಅವರಲ್ಲಿ 40 ಮಕ್ಕಳು 10 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಸೇರಿದ್ದಾರೆ. 50ಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರಿದ್ದು, ಅವರಲ್ಲಿ 4 ಮಂದಿ ಗರ್ಭಿಣಿಯರಾಗಿದ್ದಾರೆ. ಹೆಚ್ಚಿವರು ತಮ್ಮ ಮಕ್ಕಳೊಂದಿಗೆ ತಾಯ್ನಾಡಿಗೆ ಆಗಮಿಸಿದವರು. ಅವರಲ್ಲಿ 4 ಮಂದಿ ವಿವಾಹದ ಕಾರಣಕ್ಕೆ ಆಗಮಿಸಿದವರಾಗಿದ್ದಾರೆ. ಇನ್ನು ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗ ನಷ್ಟಗೊಂಡು 24 ಮಂದಿ ತಾಯ್ನಾಡಿಗೆ ವಂದೇ ಮಾತರಂ ಮಿಷನ್ ಮೂಲಕ ಆಗಮಿಸಿದವರು.