Advertisement

I.N.D.I.A ನಾಯಕರ ಪೈಕಿ ಕಾರ್ಯಕ್ರಮಕ್ಕೆ ಬಂದಿದ್ದು ಖರ್ಗೆ ಮಾತ್ರ

12:30 AM Jun 10, 2024 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 3ನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿಪಕ್ಷ ನಾಯಕರ ಪೈಕಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರವೇ ಹಾಜರಾಗಿದ್ದರು. ಉಳಿದೆಲ್ಲ ವಿಪಕ್ಷ ನಾಯಕರೆಲ್ಲರೂ ಕಾರ್ಯಕ್ರಮದಿಂದ ದೂರವುಳಿದಿದ್ದರು.

Advertisement

ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲದೆ ವಿಪಕ್ಷ ಮೈತ್ರಿಕೂಟ ಇಂಡಿಯಾ ಒಕ್ಕೂಟದಲ್ಲಿನ ‌ುರುತಿಸಿಕೊಂಡಿರುವ ಕೆಲವು ಪಕ್ಷಗಳ ನಾಯಕರಿಗೆ ರಾಷ್ಟ್ರಪತಿ ಭವನದಿಂದ ಆಹ್ವಾನ ನೀಡಲಾಗಿತ್ತಾದರೂ ಈ ಪಕ್ಷಗಳ ನಾಯಕರೆಲ್ಲರೂ ಗೈರಾಗಿದ್ದರು. ಕಾರ್ಯಕ್ರಮಕ್ಕೆ ಗೈರು ಹಾಜರಾಗುವುದಾಗಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಶನಿವಾರವೇ ಪ್ರಕಟಿಸಿದ್ದರು.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ 8000 ಆಹ್ವಾನಿತರು!
ಪದಗ್ರಹಣ ಸಮಾ ರಂಭಕ್ಕೆ ಹಲವು ವಿಶೇಷ ವ್ಯಕ್ತಿಗಳು ಸಾಕ್ಷಿಯಾಗಿದ್ದಾರೆ. ವಂದೇ ಭಾರತ್‌ ರೈಲಿನ ಮೊದಲ ಮಹಿಳಾ ಲೊಕೊ ಪೈಲಟ್‌ ಮಹಾರಾಷ್ಟ್ರದ ಸುರೇಖಾ ಯಾದವ್‌, ಹಿರಿಯ ಸಹಾಯಕ ಲೊಕೋ ಪೈಲಟ್‌ ಚೆನ್ನೈನ ಐಶ್ವರ್ಯ ಮೆನನ್‌ ಸೇರಿದಂತೆ 10 ಲೊಕೊಪೈಲಟ್‌ಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು. ಜತೆಗೆ ನೂತನ ಸಂಸಂತ್‌ ಭವನದ (ಸೆಂಟ್ರಲ್‌ ವಿಸ್ಟಾ) ಕಟ್ಟಡ ಕಾರ್ಮಿಕರಿಗೂ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಪತ್ರಕರ್ತರು, ವಕೀಲರು, ವೈದ್ಯರು ಸೇರಿದಂತೆ ವಿವಿಧ ವರ್ಗಗಳ 8000 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next