ನ್ಯಾ| ಎಂ.ಆರ್ ಶಾ ಹಾಗೂ ನ್ಯಾ|ಸಿ.ಟಿ.ರವಿ ಕುಮಾರ್ ಅವರ ನ್ಯಾಯಪೀಠವು, ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕವೂ ಕ್ಷಮಾದಾನ ಅರ್ಜಿಗಳ ನಿರ್ಣಯ ವಿಳಂಬವಾಗುತ್ತಿರುವುದನ್ನು ಗಮನಿಸಿದೆ. ಅಲ್ಲದೇ ಇಂಥದ್ದರಿಂದ ಮರಣ ದಂಡನೆ ಶಿಕ್ಷೆಯ ಉದ್ದೇಶವೇ ವ್ಯರ್ಥವಾಗುತ್ತದೆ. ಇನ್ನು ಮುಂದೆ ರಾಜ್ಯ ಸರಕಾರಗಳು ಅಥವಾ ಸಂಬಂಧಪಟ್ಟ ಆಡಳಿತ ಇಂಥ ಅರ್ಜಿಗಳ ನಿರ್ಣಯ, ವಿಲೇವಾರಿ ಖಾತರಿ ಪಡಿಸಬೇಕು. ಆಗಷ್ಟೇ ಅಪರಾಧಿಗೆ ಆತನ ಹಣೆಬರಹ ಏನು ಎಂದು ತಿಳಿಯುವುದು ಹಾಗೂ ಸಂತ್ರಸ್ತರಿಗೆ ನ್ಯಾಯ ದೊರಕುವುದು ಎಂದಿದೆ.
Advertisement
ಮಹಾರಾಷ್ಟ್ರ ಸರಕಾರವು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳ ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.