Advertisement

ಸೈನಿಕರ ಮೇಲೆ ದಾಳಿ ಮಾಡಿದ 3 ಉಗ್ರರು ಮಟಾಷ್‌

11:52 AM Mar 21, 2018 | |

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಲ್‌ವುತ್‌ ಪುರ ಎಂಬಲ್ಲಿ  ಮಂಗಳವಾರ ಭಾರೀ ಕಾರ್ಯಾಚರಣೆ ನಡೆಸಿದ ಸೇನಾಪಡೆಗಳು ಮೂವರು ಉಗ್ರರನ್ನು ಹತ್ಯೆಗೈದಿವೆ.

Advertisement

ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆಯೇ ದಾಳಿ ನಡೆಸಿ ಉಗ್ರರು ಪರಾರಿಯಾಗಿದ್ದರು. ಬಳಿಕ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಿ ಗುಂಡಿನ ಚಕಮಕಿ ನಡೆಸಿ ಮೂವರನ್ನು ಹತ್ಯೆಗೈದಿದ್ದಾರೆ. 

ಮೊದಲು ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ವರದಿಯಾಗಿತ್ತು, ಆದರೆ ಸೇನಾ ಮೂಲಗಳು ಮೂವರು ಉಗ್ರರನ್ನು ಮಾತ್ರ ಹತ್ಯೆಗೈಯಲಾಗಿದೆ ಎಂದು ಸ್ಪಷ್ಟ ಪಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next