Advertisement

ರೈತಸಂಘ ಬೆಂಬಲದಿಂದ ಅಮ್ಮನಿಗೆ ಆನೆಬಲ

01:08 PM Mar 31, 2019 | Lakshmi GovindaRaju |

ಪಾಂಡವಪುರ: ರೈತಸಂಘದ ಕಾರ್ಯಕರ್ತರ ಬೆಂಬಲದಿಂದ ನಮಗೆ ಆನೆ ಬಲ ಬಂದಿದೆ ಎಂದು ಅಮ್ಮ ಹೇಳುತ್ತಿದ್ದರು, ಈಗ ದರ್ಶನ್‌ಪುಟ್ಟಣ್ಣಯ್ಯನವರೂ ಪ್ರಚಾರದಲ್ಲಿ ತೊಡಗಿಕೊಂಡರೆ ಮತ್ತಷ್ಟು ಬಲ ಬಂದತಾಗುತ್ತೆಂದು ಅಭಿಷೇಕ್‌ ಅಂಬರೀಶ್‌ ಹೇಳಿದರು.

Advertisement

ಪಟ್ಟಣದ ಟಿಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ರೈತಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರೈತನಾಯಕ ದಿವಂಗತ ಕೆ.ಎಸ್‌.ಪುಟ್ಟಣ್ಣಯ್ಯ ಹಾಗೂ ಅಂಬರೀಶ್‌ ನಡುವೆ ಉತ್ತಮ ಬಾಂಧವ್ಯವಿತ್ತು. ಆ ಬಾಂಧವ್ಯ ಅಮ್ಮ ಸುಮಲತಾ ಹಾಗೂ ಸುನೀತಾಪುಟ್ಟಣ್ಣಯ್ಯನವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಕುಟುಂಬಗಳ ಈ ಬಾಂಧವ್ಯ ಲೋಕಸಭಾ ಚುನಾವಣೆ ಮಾತ್ರವಲ್ಲ ಮುಂದಿನ ಚುನಾವಣೆಗಳಿಗೂ ಹೀಗೆಯೇ ಮುಂದುವರಿಯಲಿದೆ ಎಂದರು.

ಜೆಡಿಎಸ್‌ಗೆ ಬೆಂಬಲವಿಲ್ಲ: ರೈತನಾಯಕಿ ಸುನೀತಾಪುಟ್ಟಣ್ಣಯ್ಯ ಮಾತನಾಡಿ, ಕಾಂಗ್ರೆಸ್‌ ಪಕ್ಷದವರು ಕಳೆದ ಚುನಾವಣೆಯಲ್ಲಿ ನಾವು ನಿಮಗೆ ಬೆಂಬಲ ಕೊಟ್ಟಿದ್ದೇವೆ. ಈ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿ ಎಂದರು. ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ನಾವು ಬೆಂಬಲ ನೀಡುತ್ತಿದ್ದೆವು.

ಜೆಡಿಎಸ್‌ ಅಭ್ಯರ್ಥಿಗೆ ನಾವು ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದೇನೆ. ಸಕ್ಕರೆ ಕಾರ್ಖಾನೆಗಳ ಉಳಿವಿಗಾಗಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸುವುದಕ್ಕಾಗಿ, ರೈತರ ಸಂಕಷ್ಟದ ವಿರುದ್ಧ ಹೋರಾಟ ಮಾಡುವುದೂ ಸೇರಿದಂತೆ ಹಲವು ಷರತ್ತುಗಳೊಂದಿಗೆ ನಾವು ಸುಮಲತಾ ಅವರಿಗೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.

ಕೀಳುಮಟ್ಟದ ರಾಜಕಾರಣ: ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಮಾತನಾಡಿ, ಸುಮಲತಾ ಎಂಬ ಹೆಸರಿನ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಸಿಎಂ ಕುಮಾರಸ್ವಾಮಿ ಜಿಲ್ಲೆಯಲ್ಲಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಘನತೆಗೆ ತಕ್ಕಂತೆ ಮಾತನಾಡಬೇಕು.

Advertisement

ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಚಿಂತನೆ ಮಾಡುವುದನ್ನು ಬಿಟ್ಟು ಪುತ್ರನನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಎ.ಎಲ್‌.ಕೆಂಪೂಗೌಡ, ಮಂಡ್ಯ ತಾಲೂಕು ಅಧ್ಯಕ್ಷ ನಾಗಣ್ಣ, ಕಾಂಗ್ರೆಸ್‌ ಕಿಸಾನ್‌ ಘಟಕದ ಅಧ್ಯಕ್ಷ ಸಿ.ಆರ್‌.ರಮೇಶ್‌,

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಲ್‌.ಸಿ.ಮಂಜುನಾಥ್‌, ಮುಖಂಡ ಡಿ.ಕೆ.ದೇವೇಗೌಡ, ರೈತ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಹರವು ಪ್ರಕಾಶ್‌, ಕೆ.ಎಸ್‌.ಪ್ರಕಾಶ್‌, ಪುರಸಭೆ ಸದಸ್ಯ ಪಾರ್ಥ ಕೆ.ಎಸ್‌.ದಯಾನಂದ, ವೀರಶೈವ ಮುಖಂಡ ಷಡಕ್ಷರಪ್ಪ ಮತ್ತಿತರರು ಹಾಜರಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿವಂಗತ ಅಂಬರೀಶ್‌ ಕಾಲಿಗೆ ಬಿದ್ದು ಸಹಕಾರ ಪಡೆದು ಏಳು ಕ್ಷೇತ್ರ ಗೆದ್ದುಕೊಂಡ ಜೆಡಿಎಸ್‌ ಶಾಸಕರು, ಇದೀಗ ಅದೇ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜಿಲ್ಲೆಯ ಜನತೆ ಇವರನ್ನು ಅರ್ಥಮಾಡಿಕೊಳ್ಳಬೇಕು.
-ಶಂಭೂನಹಳ್ಳಿ ಸುರೇಶ್‌

ನಾವು ಬೆಂಬಲ ನೀಡದೆ ಹೋದರೆ ನಿಮ್ಮ ಆಸ್ತಿಯ ಬಗ್ಗೆ ತನಿಖೆ ನಡೆಸುತ್ತೇವೆ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಅಂತಹ ಬೆದರಿಕೆಗಳಿಗೆಲ್ಲಾ ನಾವು ಹೆದರುವುದಿಲ್ಲ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವವರ ವಿರುದ್ಧª ನಮ್ಮ ಹೋರಾಡುತ್ತೇವೆ.
-ಸುನೀತಾ ಪುಟ್ಟಣ್ಣಯ್ಯ

Advertisement

Udayavani is now on Telegram. Click here to join our channel and stay updated with the latest news.

Next