Advertisement

ಅಳಿದುಳಿದವುಗಳಲ್ಲಿ ಅಮ್ಮ ಪ್ರಶಸ್ತಿ ಶ್ರೇಷ್ಠ: ವಿಶುಕುಮಾರ

10:40 AM Nov 28, 2017 | Team Udayavani |

ಸೇಡಂ: ವಾಸ್ತವಿಕತೆ ಅರಿಯುವ ಮನೋಭಾವ ಕಡಿಮೆಯಾಗುತ್ತಿರುವ ದಿನಗಳಲ್ಲಿ ಅಳಿದುಳಿದ ಪ್ರಶಸ್ತಿಗಳಲ್ಲಿ ಅಮ್ಮ ಪ್ರಶಸ್ತಿ ಶ್ರೇಷ್ಠ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ ಹೇಳಿದರು.

Advertisement

ಪಟ್ಟಣದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ಏರ್ಪಡಿಸಿದ್ದ 17ನೇ ವರ್ಷದ ರಾಜ್ಯ ಮಟ್ಟದ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು
ಮಾತನಾಡಿದರು.

ಇಡೀ ದೇಶದಲ್ಲಿ ನೀಡಲ್ಪಡುವ ಪ್ರಶಸ್ತಿಗಳ ಪೈಕಿ ಬಹುತೇಕವು ಲಾಬಿಯಿಂದ ಕೂಡಿರುತ್ತವೆ. ಇನ್ನೂ ಕೆಲವು ಹಣಕ್ಕೆ ಮಾರಾಟವಾಗುತ್ತವೆ. ಇವುಗಳ ಮಧ್ಯೆ ನಿಜವಾದ ಕಲೆಯುಳ್ಳ ಕಲಾವಿದರು, ಸಾಹಿತಿಗಳು, ಕವಿಗಳಿಗೆ ಪ್ರೋತ್ಸಾಹ ಇಲ್ಲವಾದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಲೆಯನ್ನು ಪ್ರಾಮಾಣಿಕ ರೀತಿಯಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಮ್ಮ ಪ್ರಶಸ್ತಿ ಉತ್ತಮವಾದುದು. ಪ್ರಶಸ್ತಿಗಳು ಶಾಶ್ವತವಲ್ಲ. ಆದರೆ ಅದನ್ನು ಪಡೆಯಲು ಮಾಡಿದ ಸೇವೆ ಶಾಶ್ವತ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಡಿನ ನೆಲ, ಜಲ ಮತ್ತು ಭಾಷೆ ಉಳಿಸಲು ಅನೇಕ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿದರು. ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಹೊಸಮನಿ, ರಾಜಗೋಪಾಲರೆಡ್ಡಿ, ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರು ಇದ್ದರು. 

Advertisement

ಗೌರವ ಪುರಸ್ಕಾರ: ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದ ಡಾ| ಚನ್ನಣ್ಣ ವಾಲಿಕಾರ, ಎ. ರಮೇಶ ಉಡುಪು, ಡಾ| ಎಸ್‌.ಎಸ್‌. ಗುಬ್ಬಿ, ಡಾ| ರಮೇಶ ಐನಾಪುರ ಅವರಿಗೆ ಅಮ್ಮ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ನಾಗಪ್ಪ ಮಾಸ್ತರ್‌ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು.

ರಂಗಕರ್ಮಿ ಪ್ರಭಾಕರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿಯ ಕಿರಣ ಪಾಟೀಲ, ಶ್ರವಣಕುಮಾರ ಮಠ, ರೆಹಮಾನ್‌ ಮಸ್ಕಿ ಅಮ್ಮನ ಕುರಿತು ಹಾಡು ಹಾಡಿದರು. ಪ್ರತಿಷ್ಠಾನದ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿ, ವಂದಿಸಿದರು.

ನಾಲ್ವರಿಗೆ ಪ್ರದಾನ
17ನೇ ವರ್ಷದ ಅಮ್ಮ ಪ್ರಶಸ್ತಿಯನ್ನು ಖ್ಯಾತ ಸಾಹಿತಿಗಳಾದ ಎಂ.ಆರ್‌. ಕಮಲ, ರಾಜಾರಾಂ ತಲ್ಲೂರ, ರೇಖಾ ಕಾಖಂಡಕಿ, ಎಚ್‌.ಆರ್‌. ಸುಜಾತಾ, ಗಿರೀಶ ಜಕಾಪುರೆ ಅವರಿಗೆ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next