Advertisement

ಮಂಗಳೂರಿಗೆ ಆಗಮಿಸಿದ ಅಮ್ಮ; ಇಂದಿನಿಂದ ಅಮೃತ ಸಂಗಮ

12:37 PM Feb 20, 2018 | Team Udayavani |

ಮಂಗಳೂರು: ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಾದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ (ಅಮ್ಮ) ಅವರು ಸೋಮವಾರ ಸಂಜೆ ಮಂಗಳೂರಿನ ಬೋಳೂರು ಅಮೃತಾನಂದಮಯಿ ಮಠಕ್ಕೆ ಆಗಮಿಸಿದ್ದಾರೆ. ನೂರಾರು ಭಕ್ತರು ಅಮ್ಮನವರನ್ನು ಆತ್ಮೀಯವಾಗಿ ಮಂಗಳೂರಿಗೆ ಬರಮಾಡಿಕೊಂಡರು.

Advertisement

ಫೆ. 20 ಹಾಗೂ 21ರಂದು “ಅಮೃತ ಸಂಗಮ-2018′ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಅಮ್ಮ ಅವರು ಪಾಲ್ಗೊಳ್ಳಲಿದ್ದಾರೆ. 20ರಂದು ಬೆಳಗ್ಗೆ 7ರಿಂದ ಸತ್ಸಂಗ, ಭಜನೆ, ಧ್ಯಾನ ನಡೆಯಲಿದೆ. 10 ಗಂಟೆಗೆ ಅಮ್ಮನವರು ಪ್ರವಚನ ನಡೆಸಿಕೊಡಲಿದ್ದಾರೆ. 

25 ಮಂದಿಗೆ ಗಾಲಿ ಕುರ್ಚಿ, ಬಡ ವಿದ್ಯಾರ್ಥಿಗಳಿಗೆ ಅಮೃತ ಸ್ಕಾಲರ್‌ಶಿಪ್‌ ವಿತರಣೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ವಿತರಣೆ, ಅಮಲ ಭಾರತ (ಸ್ವತ್ಛ ಭಾರತ) ಅಭಿಯಾನದ ಅಂಗವಾಗಿ ಶಾಲೆ ಗಳಲ್ಲಿ ಸ್ವತ್ಛತೆಗಾಗಿ ಮೂರು ಬಣ್ಣಗಳ ಕಸದ ಬುಟ್ಟಿಗಳ ವಿತರಣೆ, ಶತಮಾನೋತ್ಸವ ಆಚರಿಸಿದ ಉರ್ವಾ ಗಾಂಧಿನಗರದಲ್ಲಿರುವ ಸ.ಹಿ.ಪ್ರಾ. ಶಾಲೆಗೆ ಕ್ರೀಡಾ ಸಾಮಗ್ರಿಗಳ ಕೊಡುಗೆ, ಅಮೃತ ಶ್ರೀ ಯೋಜನೆಯ ಮಹಿಳಾ ಸ್ವಾವಲಂಬಿ, ಸ್ವ ಉದ್ಯೋಗ ಯೋಜನೆಯ ಅಂಗವಾಗಿ ಹೊಲಿಗೆ ಯಂತ್ರ ವಿತರಣೆ, “ಕಾರುಣ್ಯ ತೀರ’ ಪುಸ್ತಕ ಬಿಡುಗಡೆ, ಅಂಚೆ ಚೀಟಿ, ಕವರ್‌ ಅನಾವರಣ, ಅಮೃತ ಶ್ರೀ ಯೋಜನೆಯ ಸದಸ್ಯರಿಗೆ ಸೀರೆ ವಿತರಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಫೆ. 21ರಂದು ಬೆಳಗ್ಗೆ 11ಕ್ಕೆ ಅಮ್ಮನ ಪ್ರವಚನ ನಡೆಯಲಿದೆ. ಮಾನಸ ಪೂಜೆ ಮತ್ತು ಅಮ್ಮನವರ ಅನುಗ್ರಹ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಉದಯಾಸ್ತಮಾನ, ವಿಶೇಷ ಪೂಜೆಗಳು ಜರಗಲಿವೆ. ನವಗ್ರಹ ಶಾಂತಿ ಹೋಮ, ಮಹಾ ಸುದರ್ಶನ ಹೋಮ, ಭಗವತಿ ಪೂಜೆ, ಅಲಂಕಾರ ಪೂಜೆ ಸಹಿತ ವಿವಿಧ ಅರ್ಚನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಎಲ್ಲರಿಗೂ ಅಮ್ಮನ ದರ್ಶನ ಅಮ್ಮನ ದರ್ಶನ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ. ಟೋಕನ್‌ಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡುತ್ತಿದ್ದು, ಬಳಿಕ ಅಮ್ಮನ ದರ್ಶನ ಪಡೆಯಬಹುದು. ಭಕ್ತರು ಸಕಾಲದಲ್ಲಿ ಆಗಮಿಸಿ ಟೋಕನ್‌ ಪಡೆದು ಕೊಳ್ಳಬೇಕು. ಶ್ರೀ ಬ್ರಹ್ಮಸ್ಥಾನ ಮಹೋ ತ್ಸವದ ಅಂಗವಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯೂ ಇದೆ. ಅಲ್ಲದೆ ಕ್ಯಾಂಟೀನ್‌ ಸೌಲಭ್ಯ, ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸ ಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ವವರಿಗೆ ನಗರದ ಲೇಡಿಹಿಲ್‌ನಿಂದ ಅಮೃತಾ ವಿದ್ಯಾಲಯದ ವರೆಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಕನಾಡಿ ಜಂಕ್ಷನ್‌ ರೈಲ್ವೇ ನಿಲ್ದಾಣದಿಂದ ಅಮೃತಾ ವಿದ್ಯಾಲಯದವರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸ ಲಾಗಿದೆ ಎಂದು ಮಾತಾ ಅಮೃತಾನಂದ ಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next