ನವದೆಹಲಿ: ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ಮತ್ತು ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ಪುತ್ರಿ ಆರಾಧ್ಯ ಬಚ್ಚನ್, ಹೈಕೋರ್ಟ್ ಗೆ ಯೂಟ್ಯೂಬ್ ಟ್ಯಾಬ್ಲಾಯ್ಡ್‌ಗಳು ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ‘ಸುಳ್ಳು ಸುದ್ದಿ’ ವರದಿ ಮಾಡಿದ್ದಕ್ಕಾಗಿ ಯೂಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.. ತನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇಂತಹ ಸುದ್ದಿಗಳನ್ನು ಪ್ರಸಾರ ಮಾಡಲು ತಡೆಯಾಜ್ಞೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಗುರುವಾರ ( ಏ.20 ರಂದು) ನಡೆಯಲಿದೆ.
ಇದನ್ನೂ ಓದಿ: ರಂಜಾನ್ ಆರ್ಥಿಕ ನೆರವು ಕಾರ್ಯಕ್ರಮ ವೇಳೆ ಕಾಲ್ತುಳಿತ: 80ಕ್ಕೂ ಅಧಿಕ ಮಂದಿ ಮೃತ್ಯು
ಈ ಹಿಂದೆ ತನ್ನ ಮಗಳನ್ನು ಟ್ರೋಲ್ ಮಾಡಿದ ಕಾರಣಕ್ಕಾಗಿ ಅಭಿಷೇಕ್ ಬಚ್ಚನ್ ಗರಂ ಆಗಿದ್ದರು. ಸಿನಿಮಾವೊಂದರ ಪ್ರಚಾರದ ವೇಳೆ ಟ್ರೋಲರ್ಸ್ ಗಳ ವಿರುದ್ಧ ಅಭಿಷೇಕ್ ಆಕ್ರೋಶಗೊಂಡಿದ್ದರು. “ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ನಾನು ಸಹಿಸುವುದಿಲ್ಲ. ನಾನು ಸಾರ್ವಜನಿಕ ವ್ಯಕ್ತಿ, ಅದು ಸರಿ, ನನ್ನ ಮಗಳಿಗೆ ಇಂತಹ ವಿಚಾರಗಳಲ್ಲಿ ಯಾವುದೇ ಸಂಬಂಧವಿಲ್ಲ. ನಿಮಗೇನಾದರೂ ಹೇಳಬೇಕಿದ್ದರೆ ಬಂದು ನನ್ನ ಬಳಿ ಹೇಳಿ ಎಂದಿದ್ದರು.