Advertisement

Amitabh Bachchan: 81 ವರ್ಷವಾದರೂ ಕೆಲಸ ಮಾಡುವುದೇಕೆ?; ಬಿಗ್ ಬಿ ಉತ್ತರಿಸಿದ್ದು ಹೀಗೆ!

07:04 PM Aug 18, 2024 | Team Udayavani |

ಮುಂಬಯಿ: ಬಾಲಿವುಡ್ ದಿಗ್ಗಜ, ಹಿರಿಯ ನಟ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು 81 ವರ್ಷ ವಯಸ್ಸಾದರೂ ಕೆಲಸ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

Advertisement

ನನ್ನ ಸಹೋದ್ಯೋಗಿಗಳು ಇವತ್ತಿಗೂ ಏಕೆ ಕೆಲಸ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ, ಇದು ಮತ್ತೊಂದು ಉದ್ಯೋಗಾವಕಾಶ ಎನ್ನುವುದು ಹೊರತುಪಡಿಸಿದರೆ ನನ್ನ ಬಳಿ ಬೇರೆ ಉತ್ತರವಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ಜನಪ್ರಿಯ ಶೋ “ಕೌನ್ ಬನೇಗಾ ಕರೋಡ್ಪತಿ” 16 ನೇ ಸೀಸನ್ ಅನ್ನು ನಡೆಸಿಕೊಡುತ್ತಿರುವ ಅಮಿತಾಭ್ ಬಚ್ಚನ್ ಅವರು’ ಜನರು ತಮ್ಮ ವೃತ್ತಿಪರ ಜೀವನದ ಬಗ್ಗೆ ತಮ್ಮ ತೀರ್ಮಾನಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯ ಹೊಂದಿರುವುದರಿಂದ, ನಾನು ಕೆಲಸ ಮುಂದುವರೆಸಲು ಸ್ವಾತಂತ್ರ್ಯ ಹೊಂದಿದ್ದೇನೆ’ ಎಂದು ಹೇಳಿದ್ದಾರೆ.

ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ, ಬಚ್ಚನ್ ‘ಕೆಲಸದ ಸೆಟ್‌ನಲ್ಲಿ ನನ್ನನ್ನು ಕೇಳುತ್ತಲೇ ಇರುತ್ತಾರೆ.. ನಾನು ಕೆಲಸ ಮಾಡಲು ಕಾರಣ .. ಮತ್ತು ಇದಕ್ಕೆ ನನ್ನ ಬಳಿ ಉತ್ತರವಿಲ್ಲ, ಇದು ನನಗೆ ಮತ್ತೊಂದು ಉದ್ಯೋಗಾವಕಾಶವಾಗಿದೆ .. ಬೇರೆ ಏನು ಕಾರಣ ಇರಬಹುದು..” ಎಂದು ಬರೆದು ಕೊಂಡಿದ್ದಾರೆ.

ಅಮಿತಾಭ್ ಅವರು ಬ್ಲಾಕ್ ಬಸ್ಟರ್ ‘ಕಲ್ಕಿ 2898 AD’ಯಲ್ಲಿ ನಟಿಸಿದ್ದರು. ರಜನಿಕಾಂತ್ ಅವರು ನಟಿಸುತ್ತಿರುವ “ವೆಟ್ಟೈಯನ್” ಚಿತ್ರದಲ್ಲೂ ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.