ಕೋಲ್ಕತ: ಫ್ಯಾಷನ್ ಅನ್ನು ರಾಜಕೀಯ ಹೇಳಿಕೆಯಾಗಿ ಬಳಸಲಾಗುತ್ತಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತನ್ನ ಎದುರಾಳಿಗಳನ್ನು ಅಣಕ ಮಾಡಲು ಟಿ-ಶರ್ಟ್ ಅನ್ನು ವಿನ್ಯಾಸಗೊಳಿಸಿದ್ದು, ಬಿಜೆಪಿ ನಾಯಕ, ಗೃಹ ಸಚಿವ ಅಮಿತ್ ಶಾ “ಭಾರತದ ಅತಿದೊಡ್ಡ ಪಪ್ಪು” ಎಂಬ ಶೀರ್ಷಿಕೆಯೊಂದಿಗೆ ಶಾ ಅವರ ಮುಖದ ಕಾರ್ಟೂನ್ ಹೊಂದಿರುವ ಟಿ-ಶರ್ಟ್ ಬಿಳಿ, ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ರಾಹುಲ್ ಟಿ-ಶರ್ಟ್ ಬೆಲೆ ಹೇಳಿದ ಬಿಜೆಪಿಗೆ ಮೋದಿ ಸೂಟ್ ನೋಡಿ ಎಂದು ಕಾಂಗ್ರೆಸ್ ತಿರುಗೇಟು
ಬಿಜೆಪಿಯು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು “ಪಪ್ಪು” ಎಂಬ ವಿಶೇಷಣದೊಂದಿಗೆ ಕರೆದಿತ್ತು, ಇದನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಈಗ ಶಾ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದೆ.
ತೃಣಮೂಲ ಕಾಂಗ್ರೆಸ್ ಅಕ್ಟೋಬರ್ ಮೊದಲ ವಾರದಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ಪಶ್ಚಿಮ ಬಂಗಾಳದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಪೆಂಡಾಲ್ ಗಳಿಗೆ ಭೇಟಿ ನೀಡುವ ವೇಳೆ ಟಿ-ಶರ್ಟ್ ಪ್ರಚಾರವನ್ನು ಹೆಚ್ಚು ಮಾಡಲು ಉತ್ಸುಕವಾಗಿದೆ.
“ಅಪಹಾಸ್ಯವು ಸಂವಹನದ ಅತ್ಯಂತ ಶಕ್ತಿಯುತ ರೂಪವಾಗಿದೆ. ಇದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾಡಿದ ಕಾಮೆಂಟ್‌ನಿಂದ ಪ್ರಾರಂಭವಾಯಿತು ಮತ್ತು ಇದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಯಿತು. ನಂತರ ಅದು ಟಿ-ಶರ್ಟ್‌ಗಳಲ್ಲಿ ಬಂದಿತು” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಪಿಟಿಐಗೆ ತಿಳಿಸಿದ್ದಾರೆ.