Advertisement
ಬುಧವಾರ ಸಂಜೆ ಇಲ್ಲಿನ ನೆಹರೂ ಮೈದಾನದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಅಪಾಯದಲ್ಲಿರಿಸುವ ಕಾರ್ಯಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದರೂ ಅದು ಅಡುಗೆ ಸಿಲಿಂಡರ್ ಸ್ಫೋಟವೆಂದು ಹೇಳಿಕೆ ನೀಡಲಾಗಿತ್ತು. ನಾವು ಎನ್‌ಐಎ ತನಿಖೆ ಕೈಗೊಂಡಾಗ ಅದು ಭಯೋತ್ಪಾದನೆ ಕೃತ್ಯ ಎಂಬುದು ಬಯಲಾಯಿತು. ವಿಧಾನಸೌಧದ ಆವರಣದಲ್ಲೇ ಪಾಕಿಸ್ಥಾನ ಪರ ಘೋಷಣೆ ಕೂಗಿದರೂ, ನನಗೆ ಅದು ಕೇಳಿಲ್ಲ ಎಂದು ಸಿಎಂ ಹೇಳಿದ್ದರು ಎಂದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ನಡುವಿನ ಮುಸುಕಿನ ಗುದ್ದಾಟ, ಪರಸ್ಪರ ಕಾಲೆಳೆಯುವ ಯತ್ನ ಸಾಗಿದೆ. ಇದರಿಂದಾಗಿ ಬರ ಪರಿಹಾರದ ನೆರವಿಗಾಗಿ, ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ರಾಜ್ಯ ಸರಕಾರ ವಿಳಂಬ ಮಾಡಿದೆ. ನೆರವು ಬಿಡುಗಡೆ ಮಾಡುವುದರೊಳಗೆ ಲೋಕಸಭಾ ಚುನಾವಣ ನೀತಿ ಸಂಹಿತೆ ಜಾರಿಗೊಂಡಿತ್ತು. ಈ ಸತ್ಯವನ್ನು ಮರೆಮಾಚಿ ಸಿಎಂ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರು “ಕೇಂದ್ರ ನೆರವು ನೀಡಿಲ್ಲ’ ಎಂದು ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸಮರ್ಪಕ ಮಾಹಿತಿ ಇಲ್ಲದೆ, ವಿಳಂಬ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮೂರನೇ ಬಾರಿಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಬರ ಪರಿಹಾರ ನೆರವು ಬಿಡುಗಡೆ ಮಾಡುವುದರೊಳಗೆ ನೀತಿಸಂಹಿತೆ ಜಾರಿಗೊಂಡಿತ್ತು. ರಾಜ್ಯ ಸರಕಾರ ತನ್ನಿಂದಾದ ವಿಳಂಬದ ತಪ್ಪು ಮುಚ್ಚಿಕೊಳ್ಳಲು, ಸಿಎಂ-ಡಿಸಿಎಂ ನಡುವಿನ ಶೀತಲ ಸಮರ ಮರೆಮಾಚಿಸಲು ಕೇಂದ್ರದ ವಿರುದ್ಧ ಆರೋಪಕ್ಕೆ ಮುಂದಾಗಿದ್ದಾರೆ. ಬರ ಪರಿಹಾರ ನೆರವು ನೀಡಿಕೆಯಲ್ಲಿ ಕೇಂದ್ರದಿಂದ ಯಾವುದೇ ಲೋಪ ಆಗಿಲ್ಲ. ಬರ ಪರಿಹಾರ ವಿಚಾರದಲ್ಲಿ ಸಿಎಂ-ಡಿಸಿಎಂ ಹಾಗೂ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ ಎಂದರು.
Related Articles
Advertisement
ಪ್ರಜ್ವಲ್ ಪ್ರಕರಣ ಭಯಂಕರ ಅಪರಾಧ, ಕಠಿನ ಶಿಕ್ಷೆಯಾಗಲಿ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣವನ್ನು ಪ್ರಸ್ತಾವಿಸಿದ ಶಾ, “ಮಹಿಳೆಯರ ಮೇಲೆ ಅತ್ಯಾಚಾರ ಮಾಡುವವರು, ಅವರ ಗೌರವಕ್ಕೆ ಧಕ್ಕೆ ತರುವವರನ್ನು ಬಿಜೆಪಿ ಎಂದೂ ಸಹಿಸಿಕೊಳ್ಳುವುದಿಲ್ಲ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅತ್ಯಂತ ಕಠಿನ ಶಿಕ್ಷೆ ಆಗಲೇಬೇಕು’ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೂಡಲೇ ಕ್ರಮ ಕೈಗೊಳ್ಳದೆ ಆರೋಪಿ ದೇಶದಿಂದ ಹೊರಹೋಗುವುದಕ್ಕೆ ಅವಕಾಶ ನೀಡಿದ್ದು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.