Advertisement

3ನೇ ಅವಧಿಗೆ ಸ್ಪರ್ಧೆ ಇಲ್ಲ; ಮೋದಿ ಬದಲು ಮುಂದಿನ ಪ್ರಧಾನಿ ಹುದ್ದೆಗೆ ಯಾರು ಅರ್ಹ?ಸಮೀಕ್ಷೆ

01:24 PM Jan 23, 2021 | Team Udayavani |

ನವದೆಹಲಿ: ಕಳೆದ ಏಳು ವರ್ಷಗಳಿಂದ ದೇಶದ ಜನಪ್ರಿಯ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಡಳಿತ ನಡೆಸುತ್ತಿದ್ದು, ಏತನ್ಮಧ್ಯೆ 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪ್ರಧಾನಿ ಮೋದಿ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಚರ್ಚೆ ಆರಂಭಗೊಂಡಿದೆ.

Advertisement

ಇದನ್ನೂ ಓದಿ:ಮೆಹರುನ್ನೀಸಾ ಎತ್ತುವ ಪ್ರಶ್ನೆ-> 80 ಆದರೂ ಹೀರೋ ಆಗಬಹುದಾದರೆ ನಟಿಯರಿಗೇಕೆ ವಯಸ್ಸಿನ ಲೆಕ್ಕ?

ಪ್ರಧಾನಿಯಾಗಿ ಎರಡನೇ ಅವಧಿ ಮುಕ್ತಾಯಗೊಂಡ ನಂತರವೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರಿಯಲಿ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಬಯಸುತ್ತಿದ್ದು, ಒಂದು ವೇಳೆ ಮೋದಿ ಅವರು ಬದಲು ಮುಂದಿನ ಪ್ರಧಾನಿಯನ್ನಾಗಿ ಆಯ್ಕೆ ಮಾಡುವುದಾದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಹೆಚ್ಚಿನ ಜನರು ಒಲವು ವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ತಿಳಿಸಿದೆ.

ಇತ್ತೀಚೆಗೆ ಪ್ರಮುಖ ನ್ಯೂಸ್ ಚಾನೆಲ್ ವೊಂದು ನಡೆಸಿದ ನೂತನ ಸಮೀಕ್ಷೆಯಲ್ಲಿ, ಒಂದು ವೇಳೆ ವಯಸ್ಸು ಮತ್ತು ಆರೋಗ್ಯದ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಸ್ಪರ್ಧಿಸಲು ನಿರಾಕರಿಸಿದರೆ ಆ ಸ್ಥಾನಕ್ಕೆ ಅಮಿತ್ ಶಾ ಮತ್ತು ಆದಿತ್ಯನಾಥ್ ಅವರನ್ನು ಪರಿಗಣಿಸಬಹುದು ಎಂದು ತಿಳಿಸಿದೆ.

ಇದನ್ನೂ ಓದಿ:ಸ್ಪೋಟಕ ಸಾಗಿಸುವವರನ್ನು ಬಿಟ್ಟು, ಮರಳು ತುಂಬಿದ ಗಾಡಿ ಮಾತ್ರ ವಶಪಡೆಯುತ್ತಾರೆ: ಖಾದರ್ ಆಕ್ರೋಶ

Advertisement

ಎರಡನೇ ಅವಧಿಗೆ ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ವಿವಾದಿತ ನೋಟು ಅಮಾನ್ಯೀಕರಣ, ಸಿಎಎ, ಎನ್ ಆರ್ ಸಿ, ಹಾಗೂ ಕೃಷಿ ಕಾಯ್ದೆಯನ್ನು ಜಾರಿಗೆ ತಂದ ನಂತರವೂ ಮೋದಿ ಅವರ ಜನಪ್ರಿಯತೆ ಇನ್ನೂ ಕುಗ್ಗಿಲ್ಲ. ದೇಶದ ಶೇ.38ರಷ್ಟು ಜನರು ಮೋದಿ ಅವರೇ ಮುಂದಿನ ಪ್ರಧಾನಿಯಾಗಲಿ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಮೋದಿ ಅವರನ್ನು ಹೊರತುಪಡಿಸಿದರೆ ಪ್ರಧಾನಿ ಸ್ಥಾನಕ್ಕೆ ಶಾ ಅಥವಾ ಯೋಗಿ ಆದಿತ್ಯನಾಥ್ ಸೂಕ್ತ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಶೇ.10ರಷ್ಟು ಮಂದಿ ಮಾತ್ರ ಯೋಗಿ ಆದಿತ್ಯನಾಥ್ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಸಹಮತ ವ್ಯಕ್ತಪಡಿಸಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇವಲ ಶೇ.8ರಷ್ಟು ಜನರು ಒಲವು ವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ವಿವರಿಸಿದೆ.

ಈ ಸಮೀಕ್ಷೆ ಕಾಂಗ್ರೆಸ್ ಗೆ ಎಚ್ಚರಿಕೆ ಸಂದೇಶದಂತಿದೆ, ಯಾಕೆಂದರೆ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ನಂತರ ಯಾರು ಮುಂದಿನ ಪ್ರಧಾನಿಗೆ ಅರ್ಹ ಅಭ್ಯರ್ಥಿಗಳಾಗಬಹುದು ಎಂದು ಕಾಂಗ್ರೆಸ್ ನಾಯಕರ ಹೆಸರನ್ನು ಕೂಡಾ ನೀಡಲಾಗಿತ್ತು. ಆದರೆ ಯಾರೊಬ್ಬರೂ ಕಾಂಗ್ರೆಸ್ ನಾಯಕರ ಬಗ್ಗೆ ಒಲವು ವ್ಯಕ್ತಪಡಿಸಿಲ್ಲ, ಮೋದಿ ನಂತರ ಶಾ ಮತ್ತು ಯೋಗಿ ಹೆಸರನ್ನು ಜನರನ್ನು ಉಲ್ಲೇಖಸಿರುವುದು ಗಮನಿಸಬೇಕಾದ ಸಂಗತಿ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next