ನೌಶೇರಾ: ಜಮ್ಮು-ಕಾಶ್ಮೀರದಲ್ಲಿ ಈ ಬಾರಿ ಬಿಜೆಪಿಯೇ ಚುನಾವಣೆ ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನೌಶೇರಾದಲ್ಲಿ ಭಾನು ವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ನಮ್ಮ ನೇತೃತ್ವದ ಸರ್ಕಾರ ಉಗ್ರರು, ಕಲ್ಲು ತೂರಾಟ ನಡೆಸುವವರನ್ನು ಬಿಡುಗಡೆ ಮಾಡುವುದಿಲ್ಲ. ಆದರೆ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವ ಬಂದರೆ ಅವರನ್ನು ಬಿಡುಗಡೆ ಮಾಡಲಿದೆ ಎಂದು ಆರೋಪಿಸಿದ್ದಾರೆ.
ಅ.8ರಂದು ಮತ ಎಣಿಕೆಯಾದ ಬಳಿಕ “ಮೊಹಬ್ಬತ್ ಕೀ ದುಕಾನ್’ ಮುಚ್ಚಲಿದೆ ಎಂದು ಅಮಿತ್ ಶಾ ಟೀಕಿಸಿದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದನೆಯನ್ನು ಪಾತಾಳದಲ್ಲಿ ಹೂತು ಹಾಕಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಡಿದ್ದು 2ನೇ ಹಂತದ ಮತದಾನ: ಇಂದು ಬಹಿರಂಗ ಪ್ರಚಾರ ಅಂತ್ಯ
ಜಮ್ಮು-ಕಾಶ್ಮೀರ ವಿಧಾನಸಭೆಯ 2ನೇ ಹಂತದ ಮತದಾನ ಸೆ.25 ರಂದು ನಡೆಯಲಿದೆ. ಈ ಹಂತ ದಲ್ಲಿ 26 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಸೋಮವಾರ ಚುನಾವಣಾ ಬಹಿರಂಗ ಪ್ರಚಾರವು ಅಂತ್ಯಗೊಳ್ಳಲಿದೆ.