ಕೋಲ್ಕತಾ: ನೇತಾಜಿ ಸುಭಾಶ್ಚಂದ್ರ ಬೋಸ್ ಅವರನ್ನು ಮರೆಸಲು ಹಲವರು ಶತಪ್ರಯತ್ನ ನಡೆಸಿದ್ದರು. ಆದರೆ, ಅದು ಕೈಗೂಡಲಿಲ್ಲ. ಈಗ ನೇತಾಜಿಯ ಪ್ರೇರಣೆ ಪೀಳಿಗೆಯಿಂದ ಪೀಳಿಗೆಗೆ ಹೆಚ್ಚುತ್ತಲೇ ಇದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಂಗಾಲಿ ಕ್ರಾಂತಿಕಾರರಿಗೆ ಗೌರವವಂದನೆ ಸಲ್ಲಿಸುವ “ಶೌರ್ಯಾಂಜಲಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನೇತಾಜಿ ಅವರ ಸಾಧನೆ ಸ್ಮರಿಸಿದರು.
“ನೇತಾಜಿ ಅವರಿಗೆ ಜನ್ಮದತ್ತವಾಗಿ ಬಂದ ಸ್ಥೈರ್ಯ, ರಾಷ್ಟ್ರಭಕ್ತಿ, ತ್ಯಾಗ ಮತ್ತು ಸ್ವಾರ್ಥರಹಿತ ಸೇವೆಯನ್ನು ರಾಷ್ಟ್ರ ಈಗಲೂ ಸ್ಮರಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಗೆ ಕೋರ್ಟ್ ಸಮನ್ಸ್: ತೃಣಮೂಲ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಅಳಿಯನನ್ನು ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಪ. ಬಂಗಾಲದ ಸಂಸದ/ ಶಾಸಕರಿಗೆ ಮೀಸಲಾಗಿರುವ ವಿಶೇಷ ಕೋರ್ಟ್, ಕೇಂದ್ರ ಸಚಿವ ಅಮಿತ್ ಶಾಗೆ ಸಮನ್ಸ್ ಜಾರಿ ಮಾಡಿದೆ. 2018, ಆಗಸ್ಟ್ 11ರಂದು ಅಮಿತ್ ಶಾ ಕೋಲ್ಕತಾದ ರ್ಯಾಲಿಯೊಂದರಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಿಢಾನ್ ನಗರ ವಿಶೇಷ ಕೋರ್ಟ್, “ಪ್ರಕರಣದ ವಿಚಾರಣೆಗಾಗಿ ಫೆ.22ರಂದು ಕೋರ್ಟ್‌ಗೆ ಹಾಜರಾಗಬೇಕು’ ಎಂದು ಅಮಿತ್ ಶಾಗೆ ಸೂಚಿಸಿದೆ.
ಮೋದಿ ಸಭೆಗೆ ದೀದಿ ಗೈರು? ;
ಪ್ರಧಾನಿ ಮೋದಿ ನೇತೃತ್ವದಲ್ಲಿ ಶನಿವಾರ ನಡೆಯ ಲಿರುವ ನೀತಿ ಆಯೋಗ ಆಡಳಿತ ಮಂಡಳಿ ಸಭೆಗೆ ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಗೈರಾ ಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಟಿಎಂಸಿಯ ಮುಖಂಡರೊಬ್ಬರು ಖಚಿತಪಡಿಸಿದ್ದಾರೆ.
ಬಿಜೆಪಿ ಸಿಎಂ ಅಭ್ಯರ್ಥಿ ಇವರೇ! :
ಬಂಗಾಲದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿ ಯಾರೆಂ ಬುದಕ್ಕೆ ಅಮಿತ್ ಶಾ ಸುಳಿವು ನೀಡಿದ್ದಾರೆ. “ಒಂದು ವೇಳೆ ಪಕ್ಷ ಗೆದ್ದರೆ ಬಂಗಾಳದಲ್ಲಿ ಹುಟ್ಟಿ, ಬಂಗಾಲದಲ್ಲೇ ಬೆಳೆದ ಅಭ್ಯರ್ಥಿ ಸಿಎಂ ಆಗಲಿದ್ದಾರೆ’ ಎಂದಿದ್ದಾರೆ. ಆದರೆ, ಸುವೇಂದು ಅಧಿಕಾರಿ ಅಥವಾ ಮುಕುಲ್ ರಾಯ್- ಇವರಲ್ಲಿ ಯಾರಿರಬಹುದು?- ಇದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.