ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊನೆಗೂ ಅದಾನಿ ಪ್ರಕರಣ ಮತ್ತು ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿದ್ದಾರೆ. ಇದರ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಸಮಿತಿಯೊಂದನ್ನು ರಚಿಸಿದ್ದು, ಜನರು ಕಾನೂನಿನ ಮೇಲೆ ನಂಬಿಕೆ ಇರಿಸಬೇಕು ಎಂದಿದ್ದಾರೆ.
ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಲಾದ ಅದಾನಿ ಉದ್ಯಮದ ವಿರುದ್ಧದ ಆರೋಪಗಳ ಮೇಲೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ.
ಇದನ್ನೂ ಓದಿ:ಹೊನ್ನಾವರ:ಕಾರು-ಕಂಟೈನರ್ ಅಪಘಾತ;ಬಂಟಕಲ್ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಸ್ಥಳದಲ್ಲೇ ಸಾವು
“ನಮ್ಮ ಸರ್ಕಾರವು ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಸುಪ್ರೀಂ ಕೋರ್ಟ್ ಅದರ ತನಿಖೆಗಾಗಿ ಸಮಿತಿಯನ್ನು ರಚಿಸಿದೆ ಮತ್ತು ಜನರು ನ್ಯಾಯಾಂಗ ಪ್ರಕ್ರಿಯೆಯನ್ನು ನಂಬಬೇಕು” ಎಂದು ಅದಾನಿ ವಿರುದ್ಧದ ಆರೋಪಗಳು ಮತ್ತು ಮೋದಿ ಸರ್ಕಾರ ಹಾಗೂ ಅದಾನಿ ನಡುವಿನ ಮೈತ್ರಿಯ ಆರೋಪಗಳ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಕೇಳಿದಾಗ ಶಾ ಹೇಳಿದರು.
Related Articles
ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಗದ್ದಲದಿಂದ ಕಲಾಪದ ಸಮಯ ವ್ಯರ್ಥವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಎರಡು ಕಡೆಯವರು ಸಭಾಧ್ಯಕ್ಷರ ಮುಂದೆ ಕುಳಿತು ಚರ್ಚೆ ನಡೆಸಲಿ. ಅವರು ಎರಡು ಹೆಜ್ಜೆ ಮುಂದೆ ಬರಬೇಕು ಮತ್ತು ನಾವು ಎರಡು ಹೆಜ್ಜೆ ಮುಂದೆ ಹೋಗುತ್ತೇವೆ. ನಂತರ ಸಂಸತ್ತಿನ ಕೆಲಸ ಸುಸೂತ್ರವಾಗಿ ನಡೆಯುತ್ತದೆ” ಎಂದರು