Advertisement

ತುರ್ತು ಪ್ರತಿಕ್ರಿಯಾ ವಾಹನಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

10:26 PM Jan 16, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಕಾರ್ಯ‌ನಿರ್ವಹಿಸುತ್ತಿರುವ ಇ.ಆರ್.ಎಸ್.ಎಸ್. 112 ಅನ್ನು ಬಲಪಡಿಸಲು 92 ತುರ್ತು ಪ್ರತಿಕ್ರಿಯಾ ವಾಹನಗಳಿಗೆ(Emergency response vehicle) ವಿಧಾನಸೌಧದ ಮುಂಭಾಗದ ಆವರಣದಲ್ಲಿ ಶನಿವಾರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

Advertisement

ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ.ಸದಾನಂದ‌ಗೌಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಷಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ, ರಾಜ್ಯ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ ಅಮಿತ್ ಶಾ ಭೇಟಿಗೆ ಸಮಯ ಕೇಳಿದ 15ಕ್ಕೂ ಹೆಚ್ಚು ಅತೃಪ್ತ ಶಾಸಕರು

ಯು.ಪಿ 100 ನಿಂದ ಪ್ರೇರಣೆ ಪಡೆದು ನಮ್ಮ 100 ಅಂದರೆ ಬೆಂಗಳೂರು ನಗರಕ್ಕಾಗಿ ನಮ್ಮ 100 ಅನ್ನು 2017ರಲ್ಲಿ ಆರಂಭಿಸಲಾಗಿತ್ತು. ನಮ್ಮ 100 ಅಡಿ 278 ತುರ್ತು ವಾಹನಗಳನ್ನು 2017 ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿದ್ದೇವೆ.2019 ರಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು “ಒನ್ ನೇಷನ್-ಒನ್ ನಂಬರ್” ಎಂಬ 100 ಪೋಲಿಸ್, 101 ಅಗ್ನಿಶಾಮಕ, 103 ಟ್ರಾಫಿಕ್, 108 ಅಂಬ್ಯುಲೆನ್ಸ್, 109 ಮಹಿಳಾ ದೌರ್ಜನ್ಯ, 1098 ಮಕ್ಕಳ ಸಹಾಯವಾಣಿ ಇವುಗಳನ್ನು ಒಂದೇ ಸೂರಿನಡಿ ಸೇವೆ ನೀಡಲು 112 ಸಹಾಯವಾಣಿಯನ್ನು ಜಾರಿಗೆ ತಂದಿದ್ದು, ಕಷ್ಟದಲ್ಲಿರುವವರಿಗೆ, ದೌರ್ಜನ್ಯಕ್ಕೊಳಗಾದವರ ರಕ್ಷಣೆಗೆ, 15 ನಿಮಿಷದೊಳಗೆ ಸಂತ್ರಸ್ತರ ಬಳಿ ತಲುಪಲು ಹೆಚ್ಚು ವಾಹನಗಳನ್ನು ಹೆಚ್ಚಿಸುವ ಅಗತ್ಯವಿದ್ದರಿಂದ 92 ವಾಹನಗಳಿಗಿಂದು ಹಸಿರು ನಿಶಾನೆ ತೋರಲಾಗುತ್ತಿದ್ದು, 734 ಇ‌.ಆರ್.ಎಸ್.ಎಸ್ ವಾಹನಗಳು 365 ದಿನಗಳು 24×7 ರಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ಸೂದ್ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next