Advertisement

Manipur ಪರಿಸ್ಥಿತಿ ನಿಭಾಯಿಸಲು ಅಮಿತ್ ಶಾ ಸಾಕು, ಪ್ರಧಾನಿ ಅಗತ್ಯವಿಲ್ಲ: ಫಡ್ನವಿಸ್

01:24 PM Jun 23, 2023 | Vishnudas Patil |

ಸತಾರಾ: ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಕು ಮತ್ತು ಆ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗುರುವಾರ ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ಸತಾರಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಫಡ್ನವೀಸ್,ಪ್ರಧಾನಿ ಮೋದಿ ಅವರು ಭಾರತದಲ್ಲಿ ಕೋವಿಡ್ ವಿರೋಧಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಉಪಕ್ರಮವನ್ನು ತೆಗೆದುಕೊಂಡ ಕಾರಣದಿಂದಾಗಿ ದೇಶದ ಎಲ್ಲಾ 140 ಕೋಟಿ ನಾಗರಿಕರಿಗೆ ಉಚಿತವಾಗಿ ಡೋಸ್ ನೀಡಲಾಯಿತು ಅಲ್ಲದಿದ್ದರೆ, ಕೋಟ್ಯಂತರ ಜನರು ಸಾಯುತ್ತಿದ್ದರು ಎಂದರು.

ಶಿವಸೇನಾ (ಯುಬಿಟಿ) ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಶಾಂತಿಯನ್ನು ಪುನಃಸ್ಥಾಪಿಸಲು ಮಣಿಪುರಕ್ಕೆ ಭೇಟಿ ನೀಡುವ ಬದಲು ಯುಎಸ್ ಪ್ರವಾಸವನ್ನು ಏಕೆ ಕೈಗೊಂಡಿದ್ದೀರಿ ಎಂದು ಕೇಳಿದ ವಿಚಾರವಾಗಿ ಡಿಸಿಎಂ ಠಾಕ್ರೆ ಹೆಸರನ್ನು ಹೆಸರಿಸದೆ ಈ ಹೇಳಿಕೆ ನೀಡಿ ತಿರುಗೇಟು ನೀಡಿದ್ದಾರೆ.

”ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ನಾಯಕರೊಬ್ಬರು, ‘ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ ಆದರೆ ಮಣಿಪುರಕ್ಕಲ್ಲ’ ಎಂದು ಹೇಳಿದರು. ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ಕೇಂದ್ರ ಸಚಿವ ಅಮಿತ್ ಶಾ ಸಾಕು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಮೋದಿಜಿ ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ. ಅವರ (ಠಾಕ್ರೆ)ವೈಯಕ್ತಿಕ ನಿವಾಸ ದಿಂದ ವರ್ಲಿಗೆ ಹೋಗಲಿಲ್ಲ, ಆದರೆ ಮೋದಿಜಿಗೆ ಅಮೆರಿಕದ ಬದಲು ಮಣಿಪುರಕ್ಕೆ ಹೋಗುವಂತೆ ಹೇಳುತ್ತಿದ್ದೀರಿ. ಅದರ ಬಗ್ಗೆ ಮಾತನಾಡಲು ಅವರಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next