ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ವಿಚಾರದಲ್ಲಿ “ಮರೆಮಾಚಲು ಅಥವಾ ಭಯಪಡಲು ಏನೂ ಇಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟ ಪಡಿಸಿದ್ದಾರೆ. ಆಡಳಿತಾರೂಢ ಬಿಜೆಪಿಯು ಉದ್ಯಮಿ ಗೌತಮ್ ಅದಾನಿ ಅವರ ಪರವಾಗಿದೆ ಎಂದು ಕಾಂಗ್ರೆಸ್ ಆರೋಪಕ್ಕೆ ಅವರು ತಿರುಗೇಟು ನೀಡಿದರು.
ಅದಾನಿ ಷೇರುಗಳ ಕುಸಿತದ ನಂತರ ನಡೆಯುತ್ತಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಅವರು ಹೇಳಿಕೊಂಡರು.
”ಸುಪ್ರೀಂ ಕೋರ್ಟ್ ಈ ವಿಚಾರವನ್ನು ಗಮನಕ್ಕೆ ತಂದಿದೆ. ಸುಪ್ರೀಂ ಕೋರ್ಟ್‌ಗೆ ವಿಷಯ ಮುಟ್ಟಿದ ಬಳಿಕ ಸಚಿವನಾಗಿ ನಾನು ಹೇಳಿಕೆ ನೀಡುವುದು ಸರಿಯಲ್ಲ. ಆದರೆ ಇದರಲ್ಲಿ ಬಿಜೆಪಿಗೆ ಮುಚ್ಚಿಡಲು ಏನೂ ಇಲ್ಲ, ಭಯಪಡಲೂ ಏನೂ ಇಲ್ಲ” ಎಂದು ಶಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.
ಇದನ್ನೂ ಓದಿ:ಒಂದೇ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಬಂತು 11.41 ಕೋಟಿ ರೂ. ಕರೆಂಟ್ ಬಿಲ್.!
ಗೌತಮ್ ಅದಾನಿ ಅವರ ಬೆಳವಣಿಗೆಯು ಮೋದಿ ಅಧಿಕಾರಕ್ಕೆ ಬಂದ ಬಳಿಕ ತೀವ್ರವಾಗಿ ಹೆಚ್ಚಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯ ಕಾರಣಕ್ಕೆ ಶಾ ಈ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಅದಾನಿಗೆ ವಿವಿಧ ಕ್ಷೇತ್ರಗಳಲ್ಲಿ ವಿದೇಶೀ ಒಪ್ಪಂದಗಳನ್ನು ಪಡೆಯಲು ಸಹಾಯ ಮಾಡಿದ್ದಾರೆ ಸೇರಿದಂತೆ ಆರೋಪಗಳ ಸುರಿಮಳೆಗೈದರು. ಚುನಾವಣಾ ಬಾಂಡ್‌ಗಳು ಸೇರಿದಂತೆ ಕಳೆದ 20 ವರ್ಷಗಳಲ್ಲಿ ಬಿಜೆಪಿಗೆ ಅದಾನಿ ಎಷ್ಟು ಹಣವನ್ನು ನೀಡಿದ್ದಾರೆ ಎಂದು ಅವರು ಕೇಳಿದರು.