Advertisement

ಕಮಿಷನ್‌ ಕೈ ಬೇಕೋ ಕಮಿಟೆಡ್‌ ಕಮಲವೋ?

06:00 AM Apr 30, 2018 | Team Udayavani |

ಚಿತ್ರದುರ್ಗ: “”ಕಮಿಷನ್‌ ಪಡೆವ ಕಾಂಗ್ರೆಸ್‌ ಸರ್ಕಾರ ಬೇಕೋ ಅಥವಾ ಕಮಿಟೆಡ್‌ ಬಿಜೆಪಿ ಸರ್ಕಾರ ಬೇಕೋ… ಎಂಬುದನ್ನು ರಾಜ್ಯದ ಮತದಾರರೇ ನಿರ್ಧರಿಸಬೇಕು” ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

Advertisement

ಹಿರಿಯೂರಿನ ನೆಹರು ಮೈದಾನದಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ವಾಗ್ಧಾಳಿ ನಡೆಸಿದರು. ತಮ್ಮ ಇದೇ ಹೇಳಿಕೆ ಮುಂದುವರಿಸಿದ ಅಮಿತ್‌ ಶಾ,””ಕಮಿಷನ್‌ ಪಡೆದ ಸಿದ್ದರಾಮಯ್ಯ ಬೇಕಾ,ಕಮಿಟೆಡ್‌ ಆಗಿರುವ ಯಡಿಯೂರಪ್ಪ ಬೇಕಾ,ನೀವೇ ಹೇಳಿ” ಎಂದು ಲೇವಡಿ ಮಾಡಿದರು.

“ಸಿಎಂ ಸಿದ್ದರಾಮಯ್ಯ ಅವರಿಗೆ 40ಲಕ್ಷರೂ. ಮೌಲ್ಯದ ಐಷಾರಾಮಿ ವಾಚು ಕೊಟ್ಟವರಾರು” ಎಂದು ಪ್ರಶ್ನಿಸಿದ ಅಮಿತ್‌ ಶಾ,
ಸಿದ್ದರಾಮಯ್ಯನವರ ಭ್ರಷ್ಟಾಚಾರ ಪಟ್ಟಿ ಬಹು ದೊಡ್ಡದಾಗಿದೆ. ಸಿದ್ದರಾಮಯ್ಯ ಸೋಲುವ ಭೀತಿಯಿಂದ ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಪಲಾಯನ ಮಾಡಿದ್ದಾರೆ. ಆದರೆ, ಎರಡೂ ಕ್ಷೇತ್ರಗಳಲ್ಲಿ ಅವರ ಸೋಲು ನಿಶ್ಚಿತ” ಎಂದು ಟೀಕಿಸಿದರು.

“”ಸಿದ್ದರಾಮಯ್ಯ, ಟಿಪ್ಪು ಜಯಂತಿ ಆಚರಿಸುವ ಮೂಲಕ ಕರ್ನಾಟಕಕ್ಕೆ ಅಪಮಾನ ಮಾಡಿ ದ್ದಾರೆ. ಅವರಿಗೆ ಚಿತ್ರದುರ್ಗದ ಮದ ಕರಿ ನಾಯಕ, ವಿಶ್ವ ಖ್ಯಾತಿಯ ಇಂಜಿನಿಯರ್‌ ಸರ್‌.ಎಂ.ವಿ.ವಿಶ್ವೇಶ್ವರಯ್ಯ ಅವರಂತಹ ನಾಯಕರು ನೆನಪಾಗಲಿಲ್ಲವೇಕೆ?” ಎಂದರು.

ರಾಹುಲ್‌ ಹೇಳಿಕೆ ಹಾಸ್ಯಾಸ್ಪದ: “”ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿರುವ ರಾಹುಲ್‌ ಬಾಬಾ ಮತ್ತೂಮ್ಮೆ ಸಿದ್ದರಾಮಯ್ಯ ಸರ್ಕಾರ ಬರುತ್ತದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ನಾನು ರಾಹುಲ್‌ ಬಾಬಾಗೆ ಲೆಕ್ಕ ಕೊಡಬೇಕಾದ ಅಗತ್ಯವಿಲ್ಲ, ಕರ್ನಾಟಕದ ಜನ ಕೇಳಿದರೆ ಕೊಡುತ್ತೇನೆ” ಎಂದರು.””ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಕರ್ನಾಟಕಕ್ಕೆ 14ನೇ ಹಣಕಾಸು ಯೋಜನೆಯಲ್ಲಿ 2.19 ಲಕ್ಷ ಕೋಟಿ ಹಣ ನೀಡಲಾಗಿದೆ.

Advertisement

ಆದರೆ ಜನರಿಗೆ ತಲುಪಿರುವುದು ಅನುಮಾನ.ಏಕೆಂದರೆ, ಸಿದ್ದರಾಮಯ್ಯ ಸರ್ಕಾರ ನುಂಗಿ ನೀರು ಕುಡಿದಿದೆ.ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 3700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಕಿಡಿಕಾರಿದರು. ಇದೇ ವೇಳೆ,”ಬೆಳೆದ ಬೆಳೆಗೆ ರೈತರು ಮಾಡಿದ ಖರ್ಚಿನ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ನೀಡಲು ಕೇಂದ್ರ ಸಿದ್ಧವಾಗಿದೆ” ಎಂದರು.

ಸಕ್ಕರೆ ಬಾಗಿಲು ತೆರೆಯುತ್ತೇವೆ
ಹಿರಿಯೂರು ವಾಣಿ ವಿಲಾಸ ಸಕ್ಕರೆ ಕಾರ್ಖಾನೆಗೆ ಬೀಗ ಹಾಕಲಾಗಿದ್ದು, ನಾವು ವಾಣಿವಿಲಾಸ ಸಾಗರದಿಂದ ಈ ಭಾಗದ ರೈತರಿಗೆ ಐದು ಟಿಎಂಸಿ ನೀರು ಕೊಡುವ ಮೂಲಕ, ಮತ್ತೆ ಸಕ್ಕರೆ ಕಾರ್ಖಾನೆ ತೆರೆಯುತ್ತೇವೆ ಎಂದು ಅಮಿತ್‌ ಶಾ ಭರವಸೆ ನೀಡಿದರು. ಚಿತ್ರದುರ್ಗ ಜಿಲ್ಲೆಗೆ ನಾನು ಮೂರು ಬಾರಿ ಆಗಮಿಸಿದಾಗಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಬಿಜೆಪಿಗೆ ಗೆಲುವಿನ ಭರವಸೆ ಮೂಡಿಸಿದ್ದೀರಿ. ಕರ್ನಾಟಕದಲ್ಲಿ ಬಿಜೆಪಿ ಸುನಾಮಿ ಎದ್ದಿದ್ದು, ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next