Advertisement

ಜನವರಿಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮನ; ಅಷ್ಟರಲ್ಲಿ ಸಾಕಷ್ಟು ಬದಲಾವಣೆ ಖಂಡಿತಾ: ಯತ್ನಾಳ್

06:10 PM Dec 25, 2020 | Mithun PG |

ವಿಜಯಪುರ: ಜನವರಿ 16 ರಂದು ನಗರದಲ್ಲಿ ನಿರ್ಮಾಣಗೊಂಡಿರುವ ಭಾರತೀಯ ರಿಸರ್ವ್ ಪೊಲೀಸ್ ಕಛೇರಿ ಉದ್ಘಾಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಜಯಪುರಕ್ಕೆ ಆಗಮಿಸಲಿದ್ದಾರೆ. ಅಷ್ಟರಲ್ಲಿ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಕೇಂದ್ರದ ಮಾಜಿ ಸಚಿವ, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರಾಜಕೀಯ ನಿಗೂಢ ಬಾಂಬ್ ಎಸೆದಿದ್ದಾರೆ.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ‌ ಮಾತನಾಡಿದ ಅವರು, ಕೇಂದ್ರದ ಹೈಕಮಾಂಡ್ ಒಳ್ಳೆಯ‌ ನಿರ್ಣಯ‌ ತೆಗೆದುಕೊಳ್ಳಲಿದೆ. ಅಮೀತ್ ಶಾ ಅವರು‌‌‌‌  ಜನವರಿ 16 ರಂದು  ಐಆರ್ ಬಿ ಕಟ್ಟಡ ಲೋಕಾರ್ಪಣೆಗೆ ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದು, ಶಾ ಅವರು ಜಿಲ್ಲೆಗೆ ಬರುವ ಮುನ್ನವೇ ಭಾರೀ ಬದಲಾವಣೆ ಆಗಲಿದೆ ಎನ್ನುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಿಗೂಢ ಸಂದೇಶ ಹೊರ ಹಾಕಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮಗಳ ಬ್ಯಾನರ್ ನಲ್ಲಿ‌ ಮುಖ್ಯಮಂತ್ರಿ ಯಡಿಯೂರಪ್ಪ ಅವರ  ಭಾವಚಿತ್ರ ಹಾಕದ್ದಕ್ಕೆ ಮಾಧ್ಯಮದವರ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದ ಯತ್ನಾಳ, ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ, ಕೇಂದ್ರ ನಾಯಕರ ಭಾವಚಿತ್ರಗಳನ್ನು ಬ್ಯಾನರ್ ನಲ್ಲಿ ಹಾಕಲಾಗಿದೆ. ಸಿಎಂ ಯಡಿಯೂರಪ್ಪ ಅವರು ನಮ್ಮ ಹೃದಯದಲ್ಲಿ, ಮನದಲ್ಲಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ: ನೈಟ್ ಕರ್ಫ್ಯೂ ಜಾರಿಯ ಹಿಂದೆ ವಿವೇಚನೆಯಿತ್ತು, ಅದೇನೂ ರಾಜಕೀಯ ನಿರ್ಧಾರ ಅಲ್ಲ: ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next