Advertisement

ವಿಶ್ವ ಬಾಕ್ಸಿಂಗ್‌ :ಬೆಳ್ಳಿ ಪದಕ ಮೂಲಕ ಇತಿಹಾಸ ನಿರ್ಮಿಸಿದ ಅಮಿತ್‌ ಪಂಘಲ್‌

08:56 AM Sep 22, 2019 | Team Udayavani |

ಎಕಟೆರಿನ್‌ಬರ್ಗ್‌ (ರಷ್ಯಾ): ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್ ನಲ್ಲಿ ಅಮಿತ್ ಪಂಘಲ್‌ ಬೆಳ್ಳಿ ಪದಕ ಪಡೆಯುವ ಮೂಲಕ ಪುರುಷರ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

Advertisement

ಶನಿವಾರ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್ ನಲ್ಲಿ ಪಂಗಾಲ್ ಉಜ್ಬೇಕಿಸ್ತಾನ್‌ನ ಶಾಖೋಬಿದಿನ್ ಜೊಯಿರೊವ್ ಅವರಿಗೆ 5: 0 ರ ಅಂತರದಿಂದ ಮಣಿದು ಬೆಳ್ಳಿ ಪದಕ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಶುಕ್ರವಾರದ ಸೆಮಿಫೈನಲ್‌ ಹಣಾಹಣಿಯಲ್ಲಿ 2ನೇ ಶ್ರೇಯಾಂಕದ ಅಮಿತ್‌ ಪಂಘಲ್‌ 3-2 ಅಂತರದಿಂದ ಕಜಾಕಸ್ಥಾನದ ಸಾಕೆನ್‌ ಬಿಬೊಸ್ಸಿನೋವ್‌ ಅವರನ್ನು ಹಿಮ್ಮೆಟ್ಟಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.

63 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಮನೀಷ್‌ ಕೌಶಿಕ್‌ ಕೂಡ ಇಲ್ಲಿ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದು ಇದರೊಂದಿಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಇಬ್ಬರು ಸ್ಥಾನ ಗಳಿಸಿರುವುದು ಇದೇ ಮೊದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next