Advertisement

ಎಐಎಡಿಎಂಕೆ ವಿಲೀನ: ಇಂದು ಓಪಿಎಸ್‌-ಇಪಿಎಸ್‌ ಬಣಗಳ ನಿರ್ಣಾಯಕ ಮಾತುಕತೆ

11:33 AM Apr 18, 2017 | Team Udayavani |

ಚೆನ್ನೈ : ಎಐಎಡಿಎಂಕೆ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಓಪಿಎಸ್‌ ಮತ್ತು ಇಪಿಎಸ್‌ ಬಣಗಳು ವಿಲಯನಗೊಳ್ಳುವ ದಟ್ಟ ಊಹಾಪೋಹಗಳ ನಡುವೆಯೇ ಇಂದು ಉಭಯ  ಬಣಗಳು ಈ ನಿಟ್ಟಿನಲ್ಲಿ ನಿರ್ಣಾಯಕ ಮಾತುಕತೆಯನ್ನು ನಡೆಸಲು ಮುಂದಾಗಿವೆ. ಇದೇ ವೇಳೆ ಹಿರಿಯ ನಾಯಕ ತಂಬಿದೊರೆ ಅವರು ಎಐಎಡಿಎಂಕೆ ಪಕ್ಷದ ಉನ್ನತ ಮೌಲ್ಯಗಳ ಬಳುವಳಿಯನ್ನು ಕಾಪಿಡುವಂತೆ ಕೋರಿದ್ದಾರೆ. 

Advertisement

ರಾಜ್ಯದಲ್ಲಿನ ಈ ಅಚ್ಚರಿಯ ವಿಲಯನದ ಬೆಳವಣಿಗೆಯನ್ನು ಕುತೂಹಲದಿಂದ ನಿಕಟವಾಗಿ ಗಮನಿಸುತ್ತಿರುವ ಪ್ರಧಾನ ವಿರೋಧ ಪಕ್ಷವಾಗಿರುವ ಡಿಎಂಕೆ , “ಅಧಿಕಾರ ಲಾಲಸಿಗಳ ಈ ವಿಲಯನ ಹೆಚ್ಚು ಕಾಲ ಬಾಳದು’ ಎಂದು ಈಗಲೇಭವಿಷ್ಯ ನುಡಿದಿದೆ.

ಎಐಎಡಿಎಂಕೆ ಪಕ್ಷದ ಎರಡೆಲೆ ಚುನಾವಣಾ ಚಿಹ್ನೆಯನ್ನು ತನ್ನ ಬಲೆಗೆ ಹಾಕಿಕೊಳ್ಳಲು ಚುನಾವಣಾ ಆಯೋಕ್ಕೆ ಲಂಚ ಕೊಡಲು ಮುಂದಾಗಿದ್ದರು ಎನ್ನಲಾಗಿರುವ ಎಐಎಡಿಎಂಕ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹಾಗೂ ಆರ್‌ ಕೆ ನಗರ ಉಪಚನಾವಣೆಯಲ್ಲಿನ ಪಕ್ಷದ ಅಭ್ಯರ್ಥಿ ಟಿಟಿವಿ ದಿನಕರನ್‌ ಅವರಿಗೆ ಲಂಚದ ಕೇಸಿನ ತನಿಖೆಯಲ್ಲಿ ಸೇರಿಕೊಳ್ಳುವಂತೆ ಸೂಚಿಸಲು ಮತ್ತು ಅವರಿಗೆ ಸಮನ್ಸ್‌ ತಲುಪಿಸಲು ದಿಲ್ಲಿ ಪೊಲೀಸರು ಇಂದಿಗೆ ನಿಗದಿಸಿದ್ದ ಚೆನ್ನೈ ಭೇಟಿಯನ್ನು ಮುಂದಕ್ಕೆ ಹಾಕಿರುವುದಾಗಿ ತಾಜಾ ಬೆಳವಣಿಗೆಯೊಂದರಲ್ಲಿ ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next