Advertisement

ಹೈ ಸಮರ ತಂತ್ರಕ್ಕೆ ಭಾರತೀಯ ಸೇನೆ ಸಜ್ಜು

02:41 AM Aug 09, 2020 | Hari Prasad |

ಹೊಸದಿಲ್ಲಿ: ಚೀನ ಜತೆಗಿನ ಗಡಿ ಬಿಕ್ಕಟ್ಟು ಭಾರತವನ್ನು ಯುದ್ಧರಂಗಕ್ಕೆ ಇಳಿಸದೆ ಇದ್ದರೂ ಮಿಲಿಟರಿಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ನೆರವಾಗಿದೆ.

Advertisement

ಚೀನಕ್ಕೆ ಪ್ರಬಲ ಪೈಪೋಟಿಯೊಡ್ಡಲು ಭಾರತೀಯ ಸೇನೆ ಈಗ ಲೇಸರ್‌, ರೊಬೋಟಿಕ್ಸ್‌ ಮತ್ತು ಕೃತಕ ಬುದ್ಧಿಮತ್ತೆ ತರಬೇತಿಗೆ ಸಜ್ಜಾಗಿದೆ.

ಹಿರಿಯ ಲೆಫ್ಟಿನೆಂಟ್‌ ಜನರಲ್‌ ಓರ್ವರ ನೇತೃತ್ವದಲ್ಲಿ ಈ ಕುರಿತು ಅಧ್ಯಯನಗಳು ನಡೆಯುತ್ತಿವೆ.

ಡ್ರೋನ್‌ ಅಳವಡಿಕೆ, ರೋಬೋಟಿಕ್ಸ್‌, ಲೇಸರ್‌ಗಳು ಮತ್ತು ಘಾತಕ ಯುದ್ಧ ಸಾಮಗ್ರಿಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ (ಎಐ) ಮತ್ತು ಅಲ್ಗಾರಿತಂ ಯುದ್ಧ ತಂತ್ರಜ್ಞಾನದವರೆಗೆ ಸಂಶೋಧನೆಗಳು ನಡೆಯುತ್ತಿವೆ.

ಚೀನಕ್ಕೆ ಸಡ್ಡು
ಚೀನವು ಈಗಾಗಲೇ ನಾನ್‌- ಕೈನೆಟಿಕ್‌ ಮತ್ತು ನಾನ್‌ ಕಾಂಬ್ಯಾಟ್‌ನಂಥ ಅತ್ಯಾಧುನಿಕ ಯುದ್ಧ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಂಶೋಧನೆ ನಡೆಸುತ್ತಿದೆ. ಭಾರತ ಕೂಡ ಇದೇ ಮಾರ್ಗದಲ್ಲಿ ಚೀನಕ್ಕೆ ಸವಾಲೊಡ್ಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಭಾರತದ ಜತೆಗೂ ‘ಬೀಜ ಸಮರ’?
ಚೀನದ ರಹಸ್ಯ ಬೀಜಗಳು ಭಾರತಕ್ಕೂ ಕೊರಿಯರ್‌ ಮೂಲಕ ತಲುಪುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರವು ಕೃಷಿ ವಿ.ವಿ., ಭಾರತೀಯ ಕೃಷಿ ಸಂಶೋಧನ ಮಂಡಳಿಗಳನ್ನು ಎಚ್ಚರಿಸಿದೆ. ಅಮೆರಿಕ, ಕೆನಡಾ, ನ್ಯೂಜಿಲೆಂಡ್‌, ಜಪಾನ್‌ನ ನೂರಾರು ಮನೆಗಳಿಗೆ ಚೀನದ ರಹಸ್ಯ ಬೀಜದ ಪಾರ್ಸೆಲ್‌ ತಲೆನೋವು ತಂದೊಡ್ಡಿದೆ. ಪಾಕೆಟ್‌ಗಳನ್ನು ಒಡೆಯದಂತೆ ಅಲ್ಲಿನ ಸರಕಾರಗಳು ಸೂಚಿಸಿವೆ.

2018ರಿಂದಲೇ ಆರಂಭ
ಮುಂದಿನ ಪೀಳಿಗೆಯ ಯುದ್ಧವಿಜ್ಞಾನದ ಬಗ್ಗೆ ಭಾರತ 2018ರಿಂದಲೇ ಸಂಶೋಧನೆಗಳನ್ನು ಕೈಗೊಂಡಿದೆ. ಸೈಬರ್‌ ಯುದ್ಧ ಪದ್ಧತಿಯಿಂದ ತೊಡಗಿ ಮೈಕ್ರೋ ಸ್ಯಾಟಲೈಟ್‌ ಉಡಾವಣೆಯವರೆಗೆ, ಕೃತಕ ಬುದ್ಧಿಮತ್ತೆ ಆಧರಿತ ಆಧುನಿಕ ಯುದ್ಧಸಾಮಗ್ರಿ ಬಳಸುವ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next