ಬೀಜಿಂಗ್: ಭಾರತ, ಚೀನಾ ಗಡಿಯ ಬಳಿ, ಚೀನಾ ಸೇನೆಯು ಗಡಿ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆಗಳನ್ನು ಕೈಗೊಂಡಿದೆ ಎಂದು ಖುದ್ದು ಚೀನಾ ಸರ್ಕಾರವೇ ಹೇಳಿದೆ.
ಯುದ್ಧ ಸಂದರ್ಭಗಳಲ್ಲಿ ಸಮರ ಕಲೆಗಳನ್ನು ಅಭಿವ್ಯಕ್ತಗೊಳಿಸುವ ಸೈನಿಕರ ತಾಕತ್ತನ್ನು ಹೆಚ್ಚಿಸುವ ಸಲುವಾಗಿ ಚೀನಾ ಯೋಧರಿಗೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಕಮ್ಯುನಿಸ್ಟ್ ಪಾರ್ಟಿ(ಸಿಪಿಸಿ) ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ಇಂಥ ಕಠಿಣ ತರಬೇತಿಯನ್ನು ಕೈಗೊಂಡಿರುವುದು ಕಳೆದ 100 ವರ್ಷಗಳಲ್ಲಿ ಇದು ಮೂರನೇ ಬಾರಿ ಎಂದೂ ಹೇಳಿದೆ.
“ಚೀನಾ ಸೈನಿಕರ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿಗಳು ಸಾಗಿವೆ. ಸೇನೆ ಮತ್ತು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಮನ್ವಯತೆಯನ್ನು ಹೆಚ್ಚಿಸಲಾಗಿದೆ. ನಮ್ಮ ದೇಶವನ್ನು ಉಗ್ರರಿಂದ ರಕ್ಷಿಸಿಕೊಳ್ಳಲು ಗಡಿಯಲ್ಲಿ ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.’ ಎಂದು ತನ್ನ ಪ್ರಕಟಣೆಯಲ್ಲಿ ಭಾರತದ ಹೆಸರು ನಮೂದಿಸದೆಯೇ ಚೀನಾ ಸರ್ಕಾರ ಹೇಳಿದೆ.
ಇದನ್ನೂ ಓದಿ:ಕಾಂಗ್ರೆಸ್ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ: ಜೆಪಿ ನಡ್ಡಾ
ಕಳೆದ ವಾರ ನಡೆದ ಸಿಪಿಸಿ ಕೇಂದ್ರೀಯ ಸಮಿತಿ ಸಭೆಯ ನಾಲ್ಕನೇ ದಿನದಂದು ಈ ನಿರ್ಣಯವನ್ನು ಅಂಗೀಕಾರ ಮಾಡಿರುವುದಾಗಿ ವರದಿಯಿದೆ.