ಹೊಸದಿಲ್ಲಿ: 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತದ ಎದುರು ಪಾಕಿಸ್ಥಾನ ಮಂಡಿಯೂರಿದಕ್ಕೆ ಸಾಕ್ಷಿಯಾಗಿದ್ದ ಫೋಟೋವನ್ನು ಸೇನಾ ಕೇಂದ್ರ ಕಚೇರಿಯಿಂದ ತೆಗೆದಿದ್ದ ವಿಚಾರ ವಿವಾದಕ್ಕೀಡಾಗಿದ್ದ ಬೆನ್ನಲ್ಲೇ ಆ ಫೋಟೋವನ್ನು ಮಾಣಿಕ್ ಷಾ ಸೆಂಟರ್ನಲ್ಲಿ ಇರಿಸಿರುವುದಾಗಿ ಮಂಗಳವಾರ ಸೇನೆ ಸ್ಪಷ್ಟನೆ ನೀಡಿದೆ.
“ಸೇನಾ ಮುಖ್ಯಸ್ಥರಾದ ಜ|ಉಪೇಂದ್ರ ದ್ವಿವೇದಿ ಅವರ ನೇತೃತ್ವದಲ್ಲಿ ಫೋಟೋವನ್ನು ಮಾಣಿಕ್ ಷಾ ಸೆಂಟರ್ನಲ್ಲಿ ಇರಿಸಲಾಗಿದೆ.
1971ರ ಯುದ್ಧದ ನೇತೃತ್ವ ವಹಿಸಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಅವರ ಸ್ಮರಣಾರ್ಥ ಈ ಸೆಂಟರ್ ನಿರ್ಮಿಸಲಾಗಿದ್ದು, ಈ ಫೋಟೋ ಅಳವಡಿಕೆಗೆ ಇದೇ ಪ್ರಶಸ್ತ ಸ್ಥಳವಾಗಿದೆ’ ಎಂದು ತಿಳಿಸಿದ್ದಾರೆ.
ಫೋಟೋ ತೆಗೆದಿದ್ದಕ್ಕೆ ಲೋಕಸಭೆಯಲ್ಲಿ ಪ್ರಿಯಾಂಕಾ ಸರಕಾರದ ವಿರುದ್ಧ ಕಿಡಿಕಾರಿದ್ದ ಬೆನ್ನಲ್ಲೇ ಈ ಬೆಳವಣಿಗೆ ಮಹತ್ವ ಪಡೆದಿದೆ.