Advertisement

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

12:54 AM Dec 18, 2024 | Team Udayavani |

ಹೊಸದಿಲ್ಲಿ: 1971ರ ಬಾಂಗ್ಲಾ ವಿಮೋಚನಾ ಯುದ್ಧ­ದಲ್ಲಿ ಭಾರತದ ಎದುರು ಪಾಕಿಸ್ಥಾನ ಮಂಡಿಯೂರಿದಕ್ಕೆ ಸಾಕ್ಷಿಯಾಗಿದ್ದ ಫೋಟೋವನ್ನು ಸೇನಾ ಕೇಂದ್ರ ಕಚೇರಿ­ಯಿಂದ ತೆಗೆದಿದ್ದ ವಿಚಾರ ವಿವಾದಕ್ಕೀಡಾಗಿದ್ದ ಬೆನ್ನಲ್ಲೇ ಆ ಫೋಟೋವನ್ನು ಮಾಣಿಕ್‌ ಷಾ ಸೆಂಟರ್‌ನಲ್ಲಿ ಇರಿ­ಸಿರುವುದಾಗಿ ಮಂಗಳವಾರ ಸೇನೆ ಸ್ಪಷ್ಟನೆ ನೀಡಿದೆ.

Advertisement

“ಸೇನಾ ಮುಖ್ಯ­ಸ್ಥರಾದ ಜ|ಉಪೇಂದ್ರ ದ್ವಿವೇದಿ ಅವರ ನೇತೃತ್ವದಲ್ಲಿ ಫೋಟೋ­ವನ್ನು ಮಾಣಿಕ್‌ ಷಾ ಸೆಂಟರ್‌ನಲ್ಲಿ ಇರಿಸಲಾಗಿದೆ.

1971ರ ಯುದ್ಧದ ನೇತೃತ್ವ ವಹಿಸಿದ್ದ ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮಾಣಿಕ್‌ ಷಾ ಅವರ ಸ್ಮರಣಾರ್ಥ ಈ ಸೆಂಟರ್‌ ನಿರ್ಮಿಸಲಾಗಿದ್ದು, ಈ ಫೋಟೋ ಅಳವಡಿಕೆಗೆ ಇದೇ ಪ್ರಶಸ್ತ ಸ್ಥಳವಾಗಿದೆ’ ಎಂದು ತಿಳಿಸಿದ್ದಾರೆ.

ಫೋಟೋ ತೆಗೆದಿದ್ದಕ್ಕೆ ಲೋಕಸ­ಭೆಯಲ್ಲಿ ಪ್ರಿಯಾಂಕಾ ಸರಕಾರ‌ದ ವಿರುದ್ಧ ಕಿಡಿಕಾರಿದ್ದ ಬೆನ್ನಲ್ಲೇ ಈ ಬೆಳವಣಿಗೆ ಮಹತ್ವ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next