Advertisement
ಶೆಲ್ಬಿ ವಿರುದ್ಧ ಗೆಲುವು ಸಾಧಿಸುವ ಅವಕಾಶ ಗವ್ರಿಲೋವಾ ಮುಂದಿತ್ತು. ನಿರ್ಣಾಯಕ ಸೆಟ್‌ನಲ್ಲಿ ಅವರು 4-2ರ ಮುನ್ನಡೆಯಲ್ಲಿದ್ದರು. ಆದರೆ ಇದು ಟೈ-ಬ್ರೇಕರ್‌ಗೆ ವಿಸ್ತರಿಸಲ್ಪಡುವುದ ರೊಂದಿಗೆ ಶೆಲ್ಬಿ ಅದೃಷ್ಟ ಖುಲಾಯಿಸಿತು.
ವಿಶ್ವದ ನಂ.1 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ದೊಡ್ಡ ಗಂಡಾಂತರವೊಂದರಿಂದ ಪಾರಾಗಿ 3ನೇ ಸುತ್ತು ತಲುಪಿದ್ದಾರೆ. ಅಮೆರಿಕದ ನಿಕೋಲ್ ಗಿಬ್ಸ್ ವಿರುದ್ಧದ ಮುಖಾಮುಖೀಯನ್ನು ಅವರು 2-6, 6-3, 6-4 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು. 2015ರಲ್ಲಿ ಇವರಿಬ್ಬರು ಸಿಡ್ನಿಯಲ್ಲಿ ಮುಖಾಮುಖೀಯಾದಾಗ ಗಿಬ್ಸ್ ಅಂದೂ ಅಂಕ ಗಳಿಸದೆ ಶರಣಾಗಿದ್ದರು. ಈ ಬಾರಿ ಪಂದ್ಯವನ್ನು 3 ಸೆಟ್‌ಗಳಿಗೆ ವಿಸ್ತರಿಸಿದ್ದು ಗಿಬ್ಸ್ ಅವರ ಮಹತ್ಸಾಧನೆ ಎನಿಸಿತು. ಕಳೆದ ವರ್ಷದ ರನ್ನರ್ ಅಪ್ ಆಗಿರುವ ಜೆಕ್ ಆಟಗಾರ್ತಿ ಪ್ಲಿಸ್ಕೋವಾ ಇನ್ನು ಚೀನದ ಶುಯಿ ಜಾಂಗ್ ವಿರುದ್ಧ ಸೆಣಸಲಿದ್ದಾರೆ. ಒಸ್ಟಾಪೆಂಕೊ ಮೂರರ ಓಟ
ಫ್ರೆಂಚ್ ಓಪನ್ ಚಾಂಪಿಯನ್, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಕೂಡ 3ನೇ ಸುತ್ತು ತಲುಪಿ ದ್ದಾರೆ. ಅವರು ರೊಮೇನಿಯಾದ ಸೊರಾನಾ ಕಿಸ್ಟಿì ವಿರುದ್ಧ 6-4, 6-4ರಿಂದ ಗೆದ್ದು ಬಂದರು.
Related Articles
Advertisement
ಕುಜ್ನೆತ್ಸೋವಾ ಪರಾಭವರಶ್ಯದ 8ನೇ ಶ್ರೇಯಾಂಕಿತೆ ಸ್ವೆತ್ಲಾನಾ ಕುಜ್ನೆತ್ಸೋವಾ ದ್ವಿತೀಯ ಸುತ್ತಿನಲ್ಲಿ ಸೋಲುಂಡು ನಿರ್ಗಮಿಸಿದ್ದಾರೆ. ಅವರನ್ನು ಜಪಾನಿನ ಕುರುಮಿ ನಾರಾ 6-3, 3-6, 6-3ರಿಂದ ಮಣಿಸಿದರು. ಪೋಲೆಂಡಿನ ಅಗ್ನಿಸ್ಕಾ ರಾದ್ವಂಸ್ಕಾ, ಜೆಕ್ ಗಣರಾಜ್ಯದ ಲೂಸಿ ಸಫರೋವಾ, ರಶ್ಯದ ಎಲೆನಾ ವೆಸ್ನಿನಾ, ಡರಿಯಾ ಕಸತ್ಕಿನಾ, ಜಪಾನಿನ ನವೋಮಿ ಒಸಾಕಾ ಮೊದಲಾದವರೆಲ್ಲ 3ನೇ ಸುತ್ತಿಗೆ ಮುನ್ನಡೆದಿದ್ದಾರೆ.