Advertisement

ಅಮೆರಿಕನ್ನರು ಭಾರತದ ನಾಟು ನಾಟು ಟ್ಯೂನ್ ಗೆ ಕುಣಿಯುತ್ತಿದ್ದಾರೆ: ಔತಣಕೂಟದಲ್ಲಿ ಮೋದಿ ಮಾತು

11:02 AM Jun 23, 2023 | Team Udayavani |

ವಾಷಿಂಗ್ಟನ್ ಡಿಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ (ಯುಎಸ್ ಸ್ಥಳೀಯ ಕಾಲಮಾನ) ಯುಎಸ್ ಪ್ರವಾಸದಲ್ಲಿ ಎರಡು ದೇಶಗಳ ನಡುವಿನ ಬಲವಾದ ಜನರ ಸಂಪರ್ಕವನ್ನು ಎತ್ತಿ ತೋರಿಸಿದರು. ಅವರು ಪ್ರತಿ ದಿನವೂ ಪರಸ್ಪರ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

Advertisement

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಜೊತೆಗಿನ ಅಧಿಕೃತ ಔತಣಕೂಟದಲ್ಲಿ ಅವರು ಮಾತನಾಡಿದರು.

“ಪ್ರತಿ ದಿನವೂ ಭಾರತೀಯರು ಮತ್ತು ಅಮೆರಿಕನ್ನರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮಕ್ಕಳು ಹ್ಯಾಲೋವೀನ್‌ ನಲ್ಲಿ ಸ್ಪೈಡರ್‌ಮ್ಯಾನ್ ಆಗುತ್ತಾರೆ, ಅಮೆರಿಕದ ಯುವ ಜನತೆ ‘ನಾಟು ನಾಟು’ ಟ್ಯೂನ್‌ ಗಳಿಗೆ ನೃತ್ಯ ಮಾಡುತ್ತಿದ್ದಾರೆ,” ಎಂದು ಮೋದಿ ಹೇಳಿದರು.

ಇದನ್ನೂ ಓದಿ:ಚಿಕ್ಕಮಗಳೂರು: ನಿಧಿಗಾಗಿ 10 ಅಡಿ ಅಗಲ, 15 ಅಡಿ ಆಳ ಗುಂಡಿ ತೋಡಿದ ದುಷ್ಕರ್ಮಿಗಳು

ಭಾರತೀಯ ಅಮೆರಿಕನ್ನರ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು, ಅವರು ಯುಎಸ್‌ ನಲ್ಲಿ ಬಹಳ ದೂರ ಸಾಗಿದ್ದಾರೆ, ದೇಶದ ಅಂತರ್ಗತ ಸಮಾಜ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು. ಅವರು ಯುಎಸ್ ನಲ್ಲಿ ಗೌರವಾನ್ವಿತ ಸ್ಥಾನವನ್ನು ಕಂಡುಕೊಂಡಿದ್ದಾರೆ ಎಂದು ಮೋದಿ ಹೇಳಿದರು. ಅದು ಆಸ್ಪತ್ರೆಯಿರಲಿ ಅಥವಾ ಹೋಟೆಲ್, ವಿಶ್ವ ವಿದ್ಯಾಲಯ ಅಥವಾ ರಿಸರ್ಚ್ ಲ್ಯಾಬ್, ಗ್ಯಾಸ್ ಸ್ಟೇಶನ್ ಅಥವಾ ಲಾಜಿಸ್ಟಿಕ್ಸ್, ಮ್ಯಾನೇಜ್ ಮೆಂಟ್ ಅಥವಾ ಐಟಿ ಭಾರತೀಯರು ಎಲ್ಲಾ ಕಡೆ ಆವರಿಸಿಕೊಂಡಿದ್ದಾರೆ. ಹಲವರು ಶ್ವೇತ ಭವನದಲ್ಲೂ ಇದ್ದಾರೆ ಎಂದು ಮೋದಿ ಹೇಳಿದರು.

Advertisement

ಇದೇ ವೇಳೆ ಪ್ರಧಾನಿ ಮೋದಿ ಅಮೆರಿಕ ಕ್ರಿಕೆಟ್ ತಂಡಕ್ಕೂ ಶುಭ ಹಾರೈಸಿದರು. “ಬೇಸ್ ಬಾಲ್ ಮೇಲಿನ ಪ್ರೀತಿಯ ನಡುವೆ, ಯುಎಸ್‌ ನಲ್ಲಿ ಕ್ರಿಕೆಟ್ ಕೂಡ ಜನಪ್ರಿಯವಾಗುತ್ತಿದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ ಗೆ ಅರ್ಹತೆ ಪಡೆಯಲು ಅಮೆರಿಕ ತಂಡವು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಯಶಸ್ಸನ್ನು ಬಯಸುತ್ತೇನೆ” ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next