Advertisement

ರಾಷ್ಟ್ರಪ್ರಶಸ್ತಿ ವಿಜೇತ ದಿ. ಸಂಚಾರಿ ವಿಜಯ್‌ಗೆ ವಿಶೇಷ ಗೌರವ ನೀಡಿದ ಅಮೆರಿಕಾ ಚಿತ್ರಮಂದಿರ

08:34 PM Jun 29, 2021 | Team Udayavani |

ಬೆಂಗಳೂರು :  ಬೈಕ್ ಅಪಘಾತದಲ್ಲಿ ಮಡಿದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರಿಗೆ ಅಮೆರಿಕದಲ್ಲಿ ವಿಶೇಷ ಗೌರವ ಸಿಕ್ಕಿದೆ. ಅಲ್ಲಿನ ಫ್ರಾಂಕ್ಲಿನ್ ಚಿತ್ರಮಂದಿರ ತನ್ನ ಥಿಯೇಟರ್ ಬೋರ್ಡ್ ಮೇಲೆ ವಿಜಯ್ ಕುರಿತಾದ ಭಾವುಕ ಸಂದೇಶವೊಂದನ್ನು ಪ್ರಕಟಿಸಿದೆ.

Advertisement

ಜೂನ್ 15 ರಂದು ಬೈಕ್ ಅಪಘಾತದಲ್ಲಿ ಸಂಚಾರಿ ವಿಜಯ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು. ಇವರು ನಟಿಸಿದ್ದು ಬೆರಳೆಣಕೆಯಷ್ಟು ಸಿನಿಮಾಗಳಾದರೂ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದರು. ಇಂತಹ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಕಂಬಿನಿ ಮಿಡಿಯಿತು. ಇದೀಗ ಕನ್ನಡದ ಈ ನಟನಿಗೆ ಅಮೆರಿಕದ ಚಿತ್ರಮಂದಿರವೊಂದು ವಿಶೇಷ ಗೌರವ ನೀಡಿದೆ.

‘ಅಮೇರಿಕಾದ ಫ್ರಾಂಕ್ಲಿನ್ ಥಿಯೇಟರ್‌ ಡಿಜಿಟಲ್ ಬೋರ್ಡಿನಲ್ಲಿ ‘Always in our Heart , Sanchari Vijay, Gone Yet Not Forgotten’ ಎಂಬ ಸಂದೇಶ ಪ್ರಕಟಿಸಿದೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕಾರಣಕರ್ತರಾದ ರವಿ ಕಶ್ಯಪ್ ರವರಿಗೆ ವಂದನೆಗಳು” ಎಂದು ಲಿಂಗದೇವರು ಪೋಸ್ಟ್ ಹಾಕಿದ್ದಾರೆ.ಇನ್ನು 24 ಗಂಟೆಗಳ ಕಾಲ ಈ ಸಂದೇಶವನ್ನು ಥಿಯೇಟರ್ ಬೋರ್ಡ್‌ನಲ್ಲಿ ಪ್ರದರ್ಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next