Advertisement
ಅಮೆರಿಕದ ಎರಡು ಸುಧಾರಿತ ಯು -2 ಪತ್ತೇದಾರಿ ವಿಮಾನಗಳು (U-2 spy planes) ಗಡಿಯನ್ನು ಪ್ರವೇಶಿಸಿ ಮಿಲಿಟರಿ ಡ್ರಿಲ್‌ಗಳನ್ನು (ಸೇನೆ ಕುರಿತಾದ ಮಾಹಿತಿಗಳನ್ನು) ದಾಖಲಿಸಿದೆ ಎಂದು ಚೀನ ಆರೋಪಿಸಿದೆ.
Related Articles
Advertisement
ಚೀನದ ರಕ್ಷಣಾ ಸಚಿವಾಲಯದ ವಕ್ತಾರ ವು ಕ್ವಿನ್ ಅವರು ಹೇಳುವಂತೆ ಅಮೆರಿಕದ ಎರಡು ನೇವಿ ಯು -2 ವಿಮಾನಗಳು ಉತ್ತರ ಭಾಗದಲ್ಲಿ ನಮ್ಮ ಮಿಲಿಟರಿಯ ಮೇಲೆ ಹಲವು ಗಂಟೆಗಳ ಕಾಲ ಕಣ್ಣಿಟ್ಟಿದ್ದವು. ಈ ಸಂದರ್ಭದಲ್ಲಿ ಮಿಲಿಟರಿ ತರಬೇತಿಗಳು ನಮ್ಮಲ್ಲಿ ನಡೆಯುತ್ತಿತ್ತು ಎಂದಿದ್ದಾರೆ. ಅಮೆರಿಕ ಈ ಕೃತ್ಯ ನಮ್ಮ ತರಬೇತಿಯ ಮೇಲೆ ಪರಿಣಾಮ ಬೀರಿದ್ದು, ಉಭಯ ದೇಶಗಳ ನಡುವಿನ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.
ಚೀನದ ಸರಕಾರಿ ಮಾಧ್ಯಮ ವರದಿ ಮಾಡಿರುವಂತೆ, ಅಮೆರಿಕದ ಈ ಕ್ರಮವು ತುಂಬಾ ಅಪಾಯಕಾರಿಯಾಗಿದ್ದು, ಮತ್ತೂಮ್ಮೆ ಚೀನದ ಭೂಪ್ರದೇಶಕ್ಕೆ ಪ್ರವೇಶಿಸಿದರೆ ಅದು ಮಿಲಿಟರಿ ಚಕಮಕಿಗೆ ಕಾರಣವಾಗಬಹುದು ಎಂದು ಪರೋಕ್ಷವಾಗಿ ಎಚ್ಚರಿಸಿದೆ. ಸೇನಾ ಮೂಲಗಳ ಪ್ರಕಾರ ಅಲ್ಲಿನ ಎರಡು ಸ್ಥಳಗಳಲ್ಲಿಚೀನಾದ ಸೈನ್ಯವು ತರಬೇತಿಯಲ್ಲಿತ್ತು.
ನಾವೇ ಎಂದ ಅಮೆರಿಕಚೀನ ಗಡಿಯೊಳಕ್ಕೆ ಪ್ರವೇಶಿಸಿದ ಅಮೆರಿಕ ತನ್ನ ಮೇಲೆ ಚೀನ ಮಾಡಿದ ಆರೋಪಗಳನ್ನು ನಿರಾಕರಿಸಿಲ್ಲ. ನಾವು ನಮ್ಮ ಮಿತಿಯಲ್ಲಿ ಕೆಲಸ ಮಾಡಿದ್ದೇವೆ. ಯಾವುದೇ ನಿಯಮಗಳನ್ನು ಮುರಿದಿಲ್ಲ. ನಾವು ಈ ಹಿಂದೆ ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೆವು. ಅದನ್ನು ಮುಂದುವರಿಸುತ್ತೇವೆ ಎಂದು ಯುಎಸ್ ಏಫೋìರ್ಸ್ ಹೇಳಿದ್ದಾಗಿ ಸಿಎನ್‌ಎನ್ ವರದಿ ಮಾಡಿದೆ. ಯು 2 ಸಾಮರ್ಥ್ಯ ಏನು ಗೊತ್ತಾ?
ಯು -2 ಸ್ಪೈ ಏರ್‌ಕ್ರಾಫ್ಟ್ 1950ರಲ್ಲಿ ತನ್ನ ಸೇವೆಯನ್ನು ಪ್ರಾರಂಭಿದೆ. ಅಂದರೆ ಸುಮಾರು 70 ವರ್ಷ ಹಳೆಯ ವಿಮಾನ ಅದಾಗಿದೆ. ಆದರೆ ಇವುಗಳನ್ನು ಹಲವಾರು ಬಾರಿ ನವೀಕರಿಸಲಾಗಿದೆ. ಅಮೆರಿಕದ ಬಳಿ ಯು2ಗಿಂತ ಸುಧಾರಿತ ಸ್ಪೈ ವಿಮಾನಗಳಿವೆ. ಚೀನದತ್ತ ಮುಖ ಮಾಡಿದ ಯು -2 ಸ್ಪೈ ವಿಮಾನವು 70 ಸಾವಿರ ಅಡಿಗಳ ಎತ್ತರದಿಂದ ಕೆಲಸ ಮಾಡಬಹುದಾದ ಸಾಮರ್ಥ್ಯ ಹೊಂದಿದೆ. ನೆಲದ ಮೇಲೆ ನಡೆಯುತ್ತಿರುವ ಸಣ್ಣ ಚಲನೆಯ ಮೇಲೆ ಇದು ಕಣ್ಣಿಣಬಹುದಾಗಿದೆ. ಅಂತಹ ಸೂಕ್ಷ್ಮ ಚಲನೆಗಳ ಚಿತ್ರ ಮಾತ್ರವಲ್ಲದೇ ಎಚ್‌ಡಿ ವೀಡಿಯೋಗಳನ್ನು ಮಾಡಬಹುದಾಗಿದೆ. ವಿಶೇಷವೆಂದರೆ ಈ ವಿಮಾನಗಳನ್ನು ನಿರೋಧಕ ಕ್ಷಿಪಣಿಗಳ ಕೈಗೆ ಸಿಗದಂತೆ ಒಂದು ದೇಶದ ಮೇಲೆ ಹಾರಿಬಿಡಬಹುದಾಗಿದೆ. ವಿಫಲವಾದ ಚೀನ ರಾಡಾರ್!
ಕೆಲವು ಮಾಧ್ಯಮ ವರದಿ ಮಾಡಿದ ಪ್ರಕಾರ ಯು -2 ವಿಮಾನವು ಹಲವು ಗಂಟೆಗಳ ಕಾಲ ಸುಳಿದಾಡುತ್ತಿತ್ತು ಎಂದಿವೆ. 70 ಅಡಿ ಎತ್ತರದಿಂದ ಚೀನದ ಪೂರ್ಣ ಮಿಲಿಟರಿ ವ್ಯಾಯಾಮವನ್ನು ಸೆರೆಹಿಡಿಯಲಾಗಿದೆ. ಬಳಿಕ ಅಲ್ಲಿಂದ ನೇರವಾಗಿ ಹಿಂದೂ ಮಹಾಸಾಗರದಲ್ಲಿನ ಅಮೆರಿಕದ ವಾಯು ನೆಲೆ ಪ್ರವೇಶಿಸಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಚೀನದ ಸೈನ್ಯಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಅಲ್ಲಿನ ರಾಡಾರ್‌ಗಳು ಇವುಗಳನ್ನು ಗುರುತಿಸಲು ವಿಫಲವಾಗಿದ್ದವು. ಬಳಿಕ ವಿಮಾನ ಹಿಂದೂ ಮಹಾ ಸಾಗಗರದಲ್ಲಿನ ತನ್ನ ವಾಯುನೆಲೆಗೆ ಬಂದಿಳಿಯುವ ಸಂದರ್ಭ ಚಿತ್ರಗಳ ಮೂಲಕ ಪತ್ತೆ ಹಚ್ಚಲಾಯಿತು ಎಂದು ಮಾಧ್ಯಮಗಳು ಹೇಳಿವೆ.