Advertisement

ಉತ್ತರ ಕೊರಿಯಾ ಗಡಿಯಲ್ಲಿ ಅಮೆರಿಕ ಬಾಂಬರ್‌ ವಿಮಾನ

07:50 AM Oct 12, 2017 | Harsha Rao |

ನ್ಯೂಯಾರ್ಕ್‌: ಉತ್ತರ ಕೊರಿಯಾ ಹಾಗೂ ಅಮೆರಿಕ ಮಧ್ಯದ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದಂತೆಯೇ, ಉತ್ತರ ಕೊರಿಯಾವನ್ನು ಎದುರಿಸುವ ತಂತ್ರಗಳ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ. ಅಮೆರಿಕದ ಎದುರಿರುವ ಎಲ್ಲ ಸಾಧ್ಯತೆಗಳ ಬಗ್ಗೆ ರಕ್ಷಣಾ ಇಲಾಖೆ ವಿವರಣೆ ನೀಡಿದೆ. ಶಾಂತಿಯುತ ಕ್ರಮಗಳ ಜತೆಗೆ ಕಠಿನ ಕ್ರಮಗಳ ಸಾಧ್ಯತೆಯನ್ನೂ ವಿವರಿಸಲಾಗಿದೆ ಎಂದು ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ಹೇಳಿದ್ದಾರೆ. ಇನ್ನೊಂದೆಡೆ ಉತ್ತರ ಕೊರಿಯಾ ಗಡಿ ಭಾಗದಲ್ಲಿ ಅಮೆರಿಕದ ಯುದ್ಧ ವಿಮಾನಗಳು ಪ್ರಾಯೋಗಿಕ ಹಾರಾಟ ನಡೆಸಿವೆ. ಜತೆಗೆ ದಕ್ಷಿಣ ಕೊರಿಯಾದ ಎಫ್ 15 ಯುದ್ಧ ವಿಮಾನಗಳೂ ಜತೆಗೂಡಿವೆ. ಗಡಿಯ ಅತಿ ಸಮೀಪ ಯುದ್ಧವಿಮಾನಗಳು ಹಾರಾಡಿದರೂ ಹೊಡೆದುರುಳಿಸಲಾಗುತ್ತದೆ ಎಂದು ಅಮೆರಿಕಕ್ಕೆ ಈ ಹಿಂದೆ ಉತ್ತರಕೊರಿಯಾ ಎಚ್ಚರಿಕೆ ನೀಡಿತ್ತು. ಇಷ್ಟಾದರೂ ಗಡಿಯಲ್ಲಿ ವೈಮಾನಿಕ ತರಬೇತಿ ನಡೆಸುತ್ತಿರುವುದು ಯುದ್ಧ ಭೀತಿ ಹೆಚ್ಚಲು ಕಾರಣವಾಗಿದೆ.

Advertisement

ಇದೇ ವೇಳೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಯುದ್ಧ ಕಾಲದ ಯೋಜನೆ ಗಳನ್ನು ಉತ್ತರ ಕೊರಿಯಾ ಕದ್ದಿದೆ ಎಂದು ಹೇಳಲಾಗಿದೆ. ಉತ್ತರ ಕೊರಿಯಾಗೆ ಯುದ್ಧ ಯೋಜನೆಗಳಿರುವ ಸುಮಾರು 235 ಗಿಗಾಬೈಟ್‌ನಷ್ಟು ದತ್ತಾಂಶವು ಲಭ್ಯವಾಗಿರುವುದಾಗಿ ದಕ್ಷಿಣ ಕೊರಿಯಾದ ಸಂಸದ ರೀ ಚಿಯೂಲ್‌ ಹೀ ಈ ಹೇಳಿದ್ದಾರೆ. ಇದರಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿಯನ್ನು ಹೊಡೆದುರುಳಿಸುವ ಯೋಜನೆಗಳೂ ಇವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next