Advertisement
ಅಮೆರಿಕ-ಚೀನ ಜಟಾಪಟಿ ಯಿಂದ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕದ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಚೀನ, ಏಕ ಪಕ್ಷೀಯತೆಗೆ ಇದೊಂದು ಉತ್ತಮ ಉದಾಹರಣೆ ಎಂದಿದೆ.
ಕೋವಿಡ್ ಆರಂಭದ ದಿನಗಳಿಂದಲೂ ಟ್ರಂಪ್, ಚೀನ ಮತ್ತು ಡಬ್ಲ್ಯೂ ಎಚ್‌ಒ ವಿರುದ್ಧ ಸತತ ವಾಗ್ಧಾಳಿ ನಡೆಸುತ್ತಾ ಬಂದಿದ್ದರು. ಕಳೆದ ವರ್ಷ ವುಹಾನ್ ನಗರದಲ್ಲಿ ಕೋವಿಡ್ ಮೊದಲಿಗೆ ವರದಿಯಾದಾಗ ಚೀನ ಈ ಬಗ್ಗೆ ವಿಶ್ವ ಸಮುದಾಯಕ್ಕೆ ಸರಿಯಾದ ಮಾಹಿತಿ ನೀಡಿಲ್ಲ. ಕೋವಿಡ್ ಇಂದು ವಿಶ್ವವ್ಯಾಪಿ ಹರಡಲು ಚೀನ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳೇ ಕಾರಣ ಎಂದು ಆರೋಪಿಸಿದ್ದರು. ಎಪ್ರಿಲ್‌ನಲ್ಲಿ ಡಬ್ಲ್ಯೂ ಎಚ್‌ಒಗೆ ನೀಡುತ್ತಿರುವ ಹಣಕಾಸಿನ ನೆರವನ್ನು ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದಾದ ಒಂದು ತಿಂಗಳ ಅನಂತರ, ಮೇ ತಿಂಗಳಲ್ಲಿ ಡಬ್ಲ್ಯೂ ಎಚ್‌ಒದಿಂದ ಹೊರಬರುವುದಾಗಿ ಘೋಷಿ ಸಿದ್ದರು. ಈಗ ಅಧಿಕೃತ ಪ್ರಕಟನೆ ಹೊರಬಿದ್ದಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ವಕ್ತಾರರಾಗಿರುವ ಸ್ಟೀಫನ್ ಡುಜಾರಿಕ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ಅಮೆರಿಕ ಈ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರಿಗೆ 2021ರ ಜುಲೈ 6ರಿಂದ ಜಾರಿಗೆ ಬರುವಂತೆ ಸಂಸ್ಥೆಯಿಂದ ಹೊರಗುಳಿಯುವ ನಿರ್ಧಾರವನ್ನು ತಿಳಿಸಿದೆ ಎಂದು ಹೇಳಿದ್ದಾರೆ.
Related Articles
1948ರ ಜೂನ್ 21ರಿಂದ ಅಮೆರಿಕ, ಡಬ್ಲ್ಯೂ ಎಚ್‌ಒ ಸದಸ್ಯ ರಾಷ್ಟ್ರವಾಗಿದೆ. ಪ್ರತಿವರ್ಷ 450 ಮಿಲಿಯ ಡಾಲರ್‌ಗಳಷ್ಟು ಅನುದಾನ ನೀಡುತ್ತಿದೆ. ಚೀನ ವಾರ್ಷಿಕವಾಗಿ ನೀಡುತ್ತಿರುವ ಅನುದಾನ ಕೇವಲ 40 ಮಿಲಿಯ ಡಾಲರ್.
Advertisement