Advertisement

ಇಮ್ರಾನ್‌ ಖಾನ್‌ ರಷ್ಯಾ ಭೇಟಿಗೆ ಅಮೆರಿಕ ಅತೃಪ್ತಿ

07:44 PM Feb 25, 2022 | Team Udayavani |

ಮಾಸ್ಕೋ: ಉಕ್ರೇನ್‌ ಮೇಲೆ ಯುದ್ಧ ಘೋಷಿಸುವ ಸಮಯದಲ್ಲಿ ರಷ್ಯಾದ ಕ್ರೆಮ್ಲಿನ್‌ನಲ್ಲಿ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಭೇಟಿಯಾಗಿರುವುದು ಅಮೆರಿಕದ ಆಕ್ರೋಶಕ್ಕೆ ಕಾರಣವಾಗಿರಬಹುದು ಎಂದು ಪಾಕ್‌ನ ಪ್ರತಿಪಕ್ಷಗಳು ಅಂದಾಜಿಸಿವೆ.

Advertisement

ಇಮ್ರಾನ್‌ ನಡೆಯನ್ನು ಪ್ರತಿಪಕ್ಷ ನಾಯಕರೂ ಖಂಡಿಸಿದ್ದು, ಇಮ್ರಾನ್‌ಗೆ ಅವರ ಸಲಹೆಗಾರರು ಕೆಟ್ಟ ಸಲಹೆಯನ್ನು ನೀಡಿದ್ದಾರೆ. ಪಾಕಿಸ್ತಾನವು ಈ ಸಂಘರ್ಷದಿಂದ ದೂರ ಉಳಿಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಯುದ್ಧದ ಸಂದರ್ಭದಲ್ಲಿ ಪುಟಿನ್‌ ಜತೆ ಚರ್ಚೆಸಿರುವುದಕ್ಕೆ ಪ್ರತಿಯಾಗಿ ಅಮೆರಿಕವು ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಮೇಲೆ ಪರೋಕ್ಷ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆ ಎಂದೂ ಪ್ರತಿಪಕ್ಷ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಶಾಲೆಯಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯ ಬರ್ಬರ ಹತ್ಯೆ : ಕಾರಣ ನಿಗೂಢ

ಅಷ್ಟೇ ಅಲ್ಲ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್‌ ಬ್ಯಾಂಕ್‌ ಆಫ್ ಪಾಕಿಸ್ತಾನಕ್ಕೆ ಹಣಕಾಸು ಅವ್ಯವಹಾರ ನಿಗ್ರಹ ನಿಯಮಗಳ ಉಲ್ಲಂಘನೆಗಾಗಿ ಗುರುವಾರ ಅಮೆರಿಕದ ಎಫ್ಆರ್‌ಬಿ 55 ದಶಲಕ್ಷ ಡಾಲರ್‌ಗೂ ಅಧಿಕ ದಂಡ ಹಾಕಿರುವುದು ಕೂಡ ಇಮ್ರಾನ್‌-ಪುಟಿನ್‌ ಭೇಟಿಯ ಫ‌ಲಶ್ರುತಿಯಾಗಿರಬಹುದು ಎಂದೂ ವಿಶ್ಲೇಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next